ಮೌನಿ ನಾನಾದಾಗ

ಎಲ್ಲರೊಡನೆ ನಲಿವು ನಗು
ಪಟಪಟನೆ ಮಾತಿನ ಬೆರಗು
ಹಬ್ಬದಂತೆ ಸಂಭ್ರಮ ಚಲುವಿನ ಕ್ಷಣ
ಮನೆಯ ಅಂಗಳದ ಹೂವಂತೆ ಲಕ್ಷಣ….
ನಾ ಹಾಕಿದ ರಂಗವಲ್ಲಿ
ಎಳೆ ಚಿತ್ರದ ಹೂವಲ್ಲಿ
ಘಮಿಸುವ ಪರಿಮಳದಂತೆ
ಎಲ್ಲರಿಗೂ ನಾ ರತ್ನದಂತೆ…..
ಮದುವೆಯಾಗಿ ತಾಯಾದೆ
ತಾಯಾಗಿ ಎರಡು ತಿಂಗಳಿಗೆ ವಿಧವೆಯಾದೆ
ಬರ ಸಿಡಿಲು ಬಡಿದಂತಾದೆ
ಸಾವು ನೋವಲ್ಲಿ ಬೆಂದ್ಹೋದೆ…..
ಮತ್ತೆರಡು ತಿಂಗಳಿಗೆ ಕೂಸು ದೂರವಾಯ್ತು
ವಿಧಿ ಆಟಕ್ಕೆ ಜೀವ ನೂರಾಯ್ತು
ನಗು ಮರೆಯಾಗಿ ಮೌನಿ ನಾನಾದಾಗ
ತವರ ಸೆಳೆತಕ್ಕೆ ಕೊಚ್ಚಿ ಹೋದೆ….
ಅಕ್ಕರೆಯ ಅಕ್ಷರವು ಬಾಲುಗೆ ಸಕ್ಕರೆಯು
ಕತ್ತಲೆಯ ಬಾಳಿಗೆ ಶಾರದೆ ಆಗಮನವು
ಧೈರ್ಯ ಛಲದಿ ಮುನ್ನುಗ್ಗಿದ ಘಳಿಗೆಗೆ
ಹಸಿರಾಗಿ ಫಲವಾಯ್ತು ಶಿಕ್ಷಕಿಯಾಗಿ ಮುನ್ನುಗಿದೆ……
–ವಾಣಿ ಎಸ್.ಕೆ ಸಾಗರ…