ಮೋದಿ ಅವರ ಭಾಷಣವನ್ನು ಬರೆಯುವವರು ಯಾರು?!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಸಾಕಷ್ಟು ಜನರನ್ನು ಆಕರ್ಷಿಸುವುದಂತೂ ಸುಳ್ಳಲ್ಲ. ಪ್ರತಿ ದಿನ ಕಾರ್ಯಕ್ರಮಗಳು, ವೆಬಿನಾರ್​ಗಳಲ್ಲಿ ಭಾಗವಹಿಸುವ ಪ್ರಧಾನಿಯವರ ಭಾಷಣದ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಅಷ್ಟಕ್ಕೂ ಈ ಭಾಷಣಗಳನ್ನು ಬರೆಯುವವರು ಯಾರು, ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?

ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ಕೆಲವು ವಿಶೇಷ ಮಾಹಿತಿ ಕೋರಿ ಖಾಸಗಿ ವಾಹಿನಿಯೊಂದು ಆರ್ಟಿಐ ಮಾಹಿತಿ ಕೇಳಿತ್ತು. ಪ್ರಧಾನಿ ಕಚೇರಿಯಿಂದ ಮಾಹಿತಿ ಕೇಳಲಾಗಿತ್ತು. ಯಾರು ಈ ಭಾಷಣ ಬರೆಯುತ್ತಾರೆ, ಅದಕ್ಕೆಂದು ಎಷ್ಟು ಜನರ ತಂಡವಿದೆ? ಅವರಿಗೆ ಎಷ್ಟು ಖರ್ಚನ್ನು ಮಾಡಲಾಗುತ್ತಿದೆ? ಎನ್ನುವ ಮಾಹಿತಿಯನ್ನು ಕೋರಲಾಗಿತ್ತು. ಇದಕ್ಕೆ ಪ್ರಧಾನಿ ಕಚೇರಿ ಉತ್ತರ ನೀಡಿದೆ.

ಕಾರ್ಯಕ್ರಮದ ಆಧಾರದ ಮೇಲೆ, ವಿವಿಧ ಇಲಾಖೆಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು ಸೇರಿ ಅನೇಕ ಮೂಲಗಳಿಂದ ಪ್ರಧಾನಿಯವರಿಗೆ ಮಾಹಿತಿ ನೀಡಲಾಗುತ್ತದೆ.

ಅದನ್ನೆಲ್ಲ ಒಟ್ಟುಗೂಡಿಸಿ ಪ್ರಧಾನಿಯವರೇ ಭಾಷಣವನ್ನು ರೂಪುಗೊಳಿಸುತ್ತಾರೆ ಎಂದು ಮಾಹಿತಿ ನೀಡಲಾಗಿದೆ. ಆದರೆ ಅದಕ್ಕೆಂದು ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. (ಏಜೆನ್ಸೀಸ್​)

error: Content is protected !!