ಮೊಬೈಲ್ ಜೊತೆ ಮಾಂಗಲ್ಯ ಸರ ನಾಪತ್ತೆ: ಕೋವಿಡ್ ಆಸ್ಪತ್ರೆ ಕರ್ಮಕಾಂಡ

ಕೊಡಗು:ಕುಶಾಲನಗರದ ರಂಗಸಮುದ್ರ ಮೂಲದ ಕೋವಿಡ್ ಸೋಂಕಿನಿಂದ ಮೃತರಾದ ಕಮಲ ಎನ್ನುವವರ ಮೊಬೈಲ್ ನಾಪತ್ತೆಯಾಗಿರುವ ಬಗ್ಗೆ ತಮ್ಮ ಎರಡು ವರ್ಷದ ಪುತ್ರಿ ಜಿಲ್ಲಾಧಿಕಾರಿಗಳಿಗೆ ಹುಡುಕಿಕೊಡಿ ಎಂದು ಮನವಿ ಮಾಡಿರುವ ಬೆನ್ನಲ್ಲೇ ತನ್ನ ತಾಯಿಯ 25 ಗ್ರಾಂನಷ್ಟು ತೂಗುವ ಚಿನ್ನದ ಸರ ಕಾಣೆಯಾಗಿದ್ದರ ಮಡಿಕೇರಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ಪತ್ರೆ ಸಿಬ್ಬಂದಿಗಳಲ್ಲಿ ವಿಚಾರಿಸಿದ ಸಂದರ್ಭ ಸೂಕ್ತವಾದ ಪ್ರತಿಕ್ರಿಯೆ ಸಿಗದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಜೊತೆ ಮೃತ ಕಮಲರ ಪುತ್ರ ಮೂಣ್ಣಪ್ಪ ಮತ್ತು ಕುಟುಂಬಸ್ಥರು ಖುದ್ದಾಗಿ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.