ಮೊಟ್ಟೆ ದಾಳಿ ಪ್ರಕರಣ ವಿಚಾರಣೆ ಚುರುಕು

ಮಾಜಿ ಸಿ.ಎಂ ಸಿದ್ದರಾಮಯ್ಯ ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ತಿತಿಮತಿಯಲ್ಲಿ ಕಪ್ಪು ಭಾವುಟ ಪ್ರದರ್ಶನ, ಮಡಿಕೇರಿ ಮತ್ತು ಕುಶಾಲನಗರದ ಹೊರವಲಯದ ಗುಡ್ಡೆಹೊಸೂರುವಿನಲ್ಲಿ ಮೊಟ್ಟೆ ಎಸೆತ, ಶನಿವಾರಸಂತೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಸಂಬಂಧ ಪರಿಶೀಲನೆ ನಡೆಸಿ ತನಿಖೆ ಮತ್ತು ಈ ಸಂದರ್ಭ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸುವ ಜವಾಬ್ದಾರಿಯನ್ನು ಚಾಮರಾಜನಗರ ಜಿಲ್ಲೆಯ ಹೆಚ್ಚುವರಿ ವರಿಷ್ಠಾಧಿಕಾರಿ ಎಸ್. ಸುಂದರ್ ರಾಜು ರವರನ್ನು ವಿಚಾರಾಧಿಕಾರಿಯಾಗಿ ನೇಮಿಸಲಾಗಿದೆ.