ಮೊಟ್ಟೆ ಎಸೆತ ಜಿಲ್ಲಾ ಬಿಜೆಪಿಗೆ ಸಂಬಂಧವಿಲ್ಲ: ಜಿಲ್ಲಾ ಯುವ ಮೋರ್ಚಾ ಸ್ಪಷ್ಟನೆ

ತೀವ್ರ ವಿವಾದ ಸೃಷ್ಟಿಸಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲಿನ ಮೊಟ್ಟೆ ಅಟ್ಯಾಕ್ ಗೂ ಕೊಡಗು ಜಿಲ್ಲೆಯ ಬಿಜೆಪಿಗೆ ಸಂಬಂಧವಿಲ್ಲ ಎಂದು ಸ್ಪಷ್ಟನೆ ಪಕ್ಷ ಸ್ಪಷ್ಟನೆ ನೀಡಿದೆ.

ಎಂ.ಜೆ ದರ್ಶನ್ ಜೋಯಪ್ಪ,
ಜಿಲ್ಲಾಧ್ಯಕ್ಷರು, ಬಿ.ಜೆ.ಪಿ ಯುವ ಮೋರ್ಚಾ

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾ ನಿರತರಾಗಿದ್ದ ಬಿಜೆಪಿಯವರನ್ನು ಪೊಲೀಸರು ತಡೆದಿದ್ದು, ಸಿದ್ದರಾಮಯ್ಯರ ಕಾರು ದಾಟುತ್ತಿದ್ದಂತೆ ಮೊಟ್ಟೆಗಳು ಗಾಳಿಯಲ್ಲಿ ತೂರಿ ಬಂದಿದ್ದು,ಆದರೆ ಇದರಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಜೆ ದರ್ಶನ್ ಜೋಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಕೆ.ಜೆ ಮನು,
ಮಂಡಲ ವಕ್ತಾರ, ಬಿಜೆಪಿ ಯುವ ಮೋರ್ಚಾ,

ಇತ್ತ ಮಡಿಕೇರಿಯಿಂದ ಕುಶಾಲನಗರದತ್ತ ಬರುತ್ತಿದ್ದ ವೇಳೆ ಗುಡ್ಡೆಹೊಸೂರುವಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕುವ ಸಂದರ್ಭ ಮೊಟ್ಟೆಗಳು ಕಾರಿನ ಮೇಲೆ ಬಿದ್ದಿದ್ದು, ಬಿಜೆಪಿ ನಡೆಸಿದ ಪ್ರತಿಭಟನೆಗೆ ಈ ದಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜೆ ಮನು ಸ್ಪಷ್ಟನೆ ನೀಡಿದ್ದಾರೆ.

ಈ ನಡುವೆ ಮಡಿಕೇರಿಯಲ್ಲಿ ಒಂಬತ್ತು ಮಂದಿ ಮೇಲೆ ದೂರು ದಾಖಲಾಗಿದ್ದ್ದು, ಕುಶಾಲನಗರಲ್ಲಿ 9 ಮಂದಿ ಮೇಲೆ ದೂರು ದಾಖಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

error: Content is protected !!