fbpx

ಮೈಸೂರು ದಸರೆಗೆ ಕೊಡಗಿನ ಆನೆ ಆಯ್ಕೆ ಪ್ರಕ್ರಿಯೆ ಆರಂಭ

ವಿಶ್ವವಿಖ್ಯಾತ ಮೈಸೂರು ದಸಾರದಲ್ಲಿ ಪಾಲ್ಗೊಳ್ಳುವ ಕೊಡಗಿನ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ.

ಜಿಲ್ಲೆಯ ಎರಡು ಪ್ರಮುಖ ಆನೆ ಶಿಬಿರಗಳಾದ ಮತ್ತಿಗೋಡು ಮತ್ತು ದುಬಾರೆ ಶಿಬಿರಕ್ಕೆ ಭೇಟಿ ನೀಡಿರುವ ಮೈಸೂರಿನ ವನ್ಯ ಜೀವಿ ವಿಭಾಗದ ಡಿ.ಎಫ್.ಓ ವಿ.ಕರಿಕಾಳನ್ ಪರಿಶೀಲನೆ ನಡೆಸಿದ್ದು ದುಬಾರೆಯ ಧನಂಜಯ, ಗೋಪಿ, ಪ್ರಶಾಂತ, ವಿಕ್ರಮ, ಕಾವೇರಿ, ಲಕ್ಷ್ಮಣ ಮತ್ತು ಹರ್ಷ ಸಾಕಾನೆಗಳ ಹೆಸರು ಅಂತಿಮಗೊಳಿಸಿದ್ದು, ಹುಣಸೂರು ವಲಯದ ಕೊಡಗಿನ ಮತ್ತಿಗೋಡುವಿನಲ್ಲಿರುವ ಅಭಿಮನ್ಯು ನೇತೃತ್ವದ ತಂಡದ ಬಗ್ಗೆ ಅಂತಿಮ ಪಟ್ಟಿ ಸಿದ್ಧಗೊಳ್ಳಬೇಕಿದೆ.

ಅಂತಿಮ ಪಟ್ಟಿಯನ್ನು ಬೆಂಗಳೂರು ವನ್ಯ ಜೀವಿ ವಿಭಾಗದ ಮುಖ್ಯ ವಾರ್ಡನ್ ಸದ್ಯದಲ್ಲಿ ಪಟ್ಟಿ ಅಂತಿಮಗೊಳಿಸಲಿದ್ದಾರೆ.

error: Content is protected !!