ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗಕ್ಕೆ ಒಂದು ಸಾವಿರ ಕೋಟಿ: ಕೇಂದ್ರ ಸರ್ಕಾರ

ಬಹು ನಿರೀಕ್ಷಿತ ಮೈಸೂರು ಮತ್ತು ಕುಶಾಲನಗರದವರೆಗಿನ ರೈಲು ಮಾರ್ಗಕ್ಕೆ 1000 ಕೋಟಿ ಅನುದಾನ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ತಿಳಿಸಿದ್ದಾರೆ. ರೈಲ್ವೇ ಸಚಿವರಾಗಿದ್ದ ಪೀಯೂಷ್ ಗೋಯಲ್ ಅವಧಿ ಯಲ್ಲಿ ರೈಲು ಮಾರ್ಗದ ಕಾಮಗಾರಿಗೆ ಅನುಮೋದನೆ ದೊರೆತಿದ್ದು, 2022-23 ರ ಬಜೆಟ್ ನಲ್ಲಿ 1000 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ನೀತಾರಾಮ್ ತಿಳಿಸಿದ್ದಾರೆ.
2019ರಲ್ಲಿ ನಡೆದ ಸಮೀಕ್ಷೆಯಲ್ಲಿ
ನೂತನವಾಗಿ 87.2 ಕಿಲೋಮೀಟರ್ ಮಾರ್ಗದ ನಿರ್ಮಾಣಕ್ಕೆ 1,854.62 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಕೆಲವೊಂದೆಡೆ ಒಣಭೂಮಿ ಮತ್ತು ನೀರಾವರಿ ಜಮೀನು ಮಾರ್ಗದಲ್ಲಿ ಮಾರ್ಗ ಬರಲಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಆರಂಭದ ಭರವಸೆ ನೀಡಿದ್ದಾರೆ.