ಮೇ 15ರ ನಂತರ 18-44 ವರ್ಷದವರಿಗೆ ಲಸಿಕೆ:ಡಾ.ಸುಧಾಕರ್

ಬೆಂಗಳೂರು: ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡದುಕೊಳ್ಳುತ್ತಿರುವ ಹಿನ್ನಲೆ ಲಸಿಕೆಗಳ ಅಭಾವ ಇರುವ ಕಾರಣ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಹಂತದ ಲಸಿಕೆ ಪೂರ್ಣಗೊಳುತ್ತಿದ್ದಂತೆ ಅಂದರೆ ಮೇ 15ರ ನಂತರ 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.