fbpx

ಮೇಲ್ಮನೆ ಮೆಟ್ಟಿಲೇರಿ ಮೀಸೆ ತಿರುವಿದ ಸುಜಾಕುಶಾಲಪ್ಪ: ಭದ್ರಕೋಟೆಯಲ್ಲಿ ಭದ್ರವಾದ ಬಿಜೆಪಿ!

ಭಾರತೀಯ ಜನತಾ ಪಾರ್ಟಿಯ ಭದ್ರಕೋಟೆಯಾದ ಕೊಡಗಿನಲ್ಲಿ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ಮೇಲ್ಮನೆ ಚುನಾವಣೆಯಲ್ಲಿ ಪಕ್ಷದ ಅಭ್ಯಾರ್ಥಿ ಸುಜಾಕುಶಾಲಪ್ಪ 102 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯಾರ್ಥಿ ಡಾ.ಮಂಥರ್ ಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಸುಜಾಕುಶಾಲಪ್ಪ ಮತ್ತು ಮಂಥರ್ ಗೌಡ ನಡುವೆ ನೇರ ಪೈಪೋಟಿ ನಡುವೆ ಸುಜಾಕುಶಾಲಪ್ಪ 705,ಡಾ.ಮಂಥರ್ ಗೌಡ 603 ಮತಗಳನ್ನು ಪಡೆದು ಎರಡನೇ ಸ್ಥಾನ ಉಳಿಸಿಕೊಂಡರು, ಚಲಾವಣೆಗೊಂಡ 1324 ಮತಗಳ ಪೈಕಿ 17 ಮತಗಳು ಅನರ್ಹವಾಗಿದೆ.

ಮತ ಎಣಿಕೆ ಅಂತ್ಯ ಕಾಣುತ್ತಿದ್ದಂತೆ ಮತ ಎಣಿಕೆಯ ಕೇಂದ್ರ ಸಂತ ಜೋಸೆಫ್ ಶಾಲೆಯ ಆವರಣದಲ್ಲಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

error: Content is protected !!