ಮೇಲ್ಮನವಿ ಸಲ್ಲಿಸೋಕೆ ಅವಕಾಶ ಇದೆಯಾದರೆ, ಶಾಂತಿಯುತ ಬಂದ್ ಮಾಡೋದರಲ್ಲಿ ತಪ್ಪೇನಿದೆ: ಸಿದ್ಧರಾಮಯ್ಯ

ಬೆಂಗಳೂರು(ಮಾ.17): ಹಿಜಾಬ್ (Hijab) ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಬಂದ್ (Karnataka Bandh) ಮಾಡಿರುವ ವಿಚಾರವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನ (Congress) ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah), ನ್ಯಾಯಾಲಯದ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸೋಕೆ ಅವಕಾಶ ಇದೆ ಎಂದಾದರೆ ಶಾಂತಿಯುತವಾಗಿ ಬಂದ್ ಮಾಡೋದರಲ್ಲಿ ತಪ್ಪೇನಿಸದೆ ಎಂದಿದ್ದಾರೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಸದನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಪ್ರಶ್ನೆ ಮಾಡಿ , ನಾನು ವಕೀಲ ಅಲ್ಲ.
ಸಿದ್ದರಾಮಯ್ಯನವರು ವಕೀಲರು. ಆದ್ರೆ ಹೈಕೋರ್ಟ್ ಆದೇಶ ಪಾಲನೆ ಮಾಬೇಕಾ ಬೇಡವಾ ನೀವೇ ಹೇಳಿ ಎಂದು ಪ್ರಶ್ನಿಸಿದರು. ಇನ್ನು ಹಿಜಾಬ್ ವಿಚಾರದ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಇಷ್ಟಾದ ಮೇಲೂ ತೀರ್ಪು ವಿರೋಧಿಸಿ ಬಂದ್ ಮಾಡ್ತಾರೆ ಎಂದ್ರೆ ಏನ್ ಅರ್ಥ, ಇದಕ್ಕೆಲ್ಲಾ ಅವಕಾಶ ನೀಡಬಾರದು ಎಂದು ಉಡುಪಿ ಶಾಸಕ ರಘುಪತಿ ಭಟ್ (Raghupathi bhat) ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಪ್ರತಿಭಟನೆ ಮಾಡೋದು ಶಾಂತಿಯುತವಾಗಿ ಬಂದ್ ಮಾಡೋದು ತಪ್ಪಲ್ಲ. ಸರ್ಕಾರ ಅದನ್ನು ತಡೆಯತ್ತಾ ಎಂದು ಪ್ರಶ್ನೆ ಮಾಡಿದ್ರು. ತೀರ್ಪು ಗೌರವಿಸಬೇಕು ನಿಜ ಆದ್ರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸೋದು ಎಂದರೆ ತೀರ್ಪನ್ನು ವಿರೋಧ ಮಾಡಿದಂತೆ ಅಲ್ಲವೆ. ಮೇಲ್ಮನವಿ ಸಲ್ಲಿಸೋಕೆ ಅವಕಾಶ ಇದೆ ಎಂದಾದರೆ ಶಾಂತಿಯುತವಾಗಿ ಬಂದ್ ಮಾಡೋದರಲ್ಲಿ ಏನು ತಪ್ಪು ಎನ್ನುವ ಅರ್ಥದಲ್ಲಿ ಇಂದಿನ ಕರ್ನಾಟಕ ಬಂದ್ ಅನ್ನು ಸಮರ್ಥನೆ ಮಾಡಿಕೊಂಡರು.
ಸಿದ್ದರಾಮಯ್ಯರ ಮಾತಿಗೆ ಸಿಟ್ಟಾದ ಸಿಟಿ ರವಿ, ಹೈಕೋರ್ಟ್ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸೋಕೆ ಅವಕಾಶ ಇದೆ ಸರಿ. ಆದ್ರೆ ಭಯ ಮೂಡಿಸಿ, ಶಿಕ್ಷಣ ವ್ಯವಸ್ಥೆ ವಾತಾವರಣ ವ್ಯವಸ್ಥೆ ಹಾಳು ಮಾಡೋಕೆ ಅವಕಾಶ ಇದೆಯೆ ಎಂದು ಏರುದನಿಯಲ್ಲಿ ಪ್ರಶ್ನೆ ಮಾಡಿದ್ರು. ಜೊತೆಗೆ ವೋಟ್ ಬ್ಯಾಂಕ್ ರಾಜಕಾರಣ ಮಹಾ ಪಾಪ ಎಂದು ಸಿದ್ದರಾಮಯ್ಯರ ವಿರುದ್ಧ ಹರಿಹಾಯ್ದರು. ಸಿಟಿ ರವಿ ಮಾತಿಗೆ ದನಿಗೂಡಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯರ ಮಾತಿಗೆ ಆಕ್ಷೇಪ ಎತ್ತಿ. ಇದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ಹೇಳಿದರು.