fbpx

ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು: ಡಿ.ಕೆ.ಶಿ

ತಮಿಳುನಾಡಿನ ರಾಜಕೀಯ ಹಸ್ತಕ್ಷೇಪದಿಂದ ಮೇಕೆದಾಟು ಯೋಜನೆ ಕುಂಟಠಿತವಾಗಿದ್ದು, ಕೇಂದ್ರ ಸರ್ಕಾರ ಮನಸ್ಸು ಮಾಡಿದಲ್ಲಿ ಯೋಜನೆ ಜಾರಿಗೊಳಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾವೇರಿ ಮೂಲಸ್ಥಾನ ತಲಕಾವೇರಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂದಾಜು 9,900 ಕೋಟಿ ವೆಚ್ಚದ ಯೋಜನೆಯಿಂದ ರಾಜ್ಯದ ಏಳು ಜಿಲ್ಲೆಗಳಿಗೆ ಅನುಕೂಲವಾಗಲಿದ್ದು,ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮೋಧನೆ ದೊರೆತರೆ ಕಾಮಗಾರಿ ಆರಂಭಿಸಬಹುದು ಎಂದು ಅವರು ತಿಳಿಸಿದರು.

ಪರಿಸರ ಇಲಾಖೆ ಭೂ ಸ್ವಾಧೀನ ಸಂಬಂಧ ತಕರಾರು ಎತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಂದರು.
ಇದಕ್ಕೂ ಮೊದಲು ಭಗಂಡೇಶ್ವರ ಕ್ಷೇತ್ರದ ತ್ರಿವೇಣಿ ಸಂಗಮಕ್ಕೆ ಭೇಟಿ ಮಾಡಿ ಬಳಿಕ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದರು.

error: Content is protected !!