ಮೆದುಳು ಜ್ವರದ ಕುರಿತು ಎಚ್ಚರಿಕೆ ಅಗತ್ಯ: ಚಾರುಲತಾ ಸೋಮಲ್

ಕೊಡಗು ಜಿಲ್ಲೆಯಲ್ಲಿ ಮೆದುಳು ಜ್ವರ ಪ್ರಕರಣ ಪತ್ತೆಯಾಗಿಲ್ಲ. ಸೊಳ್ಳೆಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗ ಇದಾಗಿದ್ದು, ಮಕ್ಕಳಲ್ಲಿ ವೇಗವಾಗಿ ಹರಡುವ ಕಾಯಿಲೆಯಾಗಿದೆ.
ಜಾನುವಾರುಗಳು, ಸಾಕು ಪ್ರಾಣಿಗಳಿಂದ ಮಕ್ಕಳನ್ನು ದೂರವಿಡಲು ಸೂಚನೆ ನೀಡಲಾಗಿದೆ. ಜ್ವರ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆ ನಡೆಸಬೇಕು ಎಂದು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿಕೆ ನೀಡಿದ್ದಾರೆ.