ಮೃತ್ಯುಂಜಯ ದೇವಸ್ಥಾನ ವಾರ್ಷಿಕ ಉತ್ಸವಕ್ಕೆ ತೆರೆ

ದಕ್ಷಿಣ ಕೊಡಗಿನ ಬಾಡಗರಕೇರಿಯಲೂಲಿರುವ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವ ಕ್ಕೆ ಅಂತಿಮ ತೆರೆ ಬಿದ್ದಿದೆ.
ಸಂಪ್ರದಾಯದಂತೆ ಫೆಬ್ರವರಿ 13 ರಂದು ಕೊಡಿಮರ ನಿಲ್ಲಿಸಿದ ನಂತರ ಬಳಿಕ ಹಲವು ಪೂಜೆ ಕಾರ್ಯದ ಬಳಿಕ 10 ದಿನದ ನಂತರ ಇಳಿಸುವ ಮೂಲಕ ಉತ್ಸವಕ್ಕೆ ತೆರೆ ಬಿದ್ದಿತು.
ಅಂತಿಮ ದಿನದಂದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಉತ್ಸವ ಮೂರ್ತಿಯ ಅದ್ಭುತ ಸ್ನಾನ, ಉತ್ಸವ ಮೂರ್ತಿಯ ಪ್ರದಕ್ಷಿಣೆ ನೆರವೇರಿದವು.
ಉತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು, ಮಧ್ಯಾಹ್ನ ಭಕ್ತರಿಗೆ ಸಾಮೂಹಿಕ ಅನ್ನಧಾನ,ಸಂಜೆ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.