fbpx

ಮೂಲೆ ಸೇರಿದ್ದ ಫೊಟೋ ವಿಶ್ವದೆಲ್ಲೆಡೆ ಮನೆ ಮಾತಾದ ಕಥೆ…!

ಚಿಗೆವಾರ ಇಂದಿಗೂ ಎಂದೆಂದಿಗೂ ವಿಶ್ವ ಪ್ರಸಿದ್ಧ. ಅದಕ್ಕೆ ಕಾರಣ ಅವನ ಎಂಟೆದೆ ಗುಂಡಿಗೆ. ಯಾವುದಕ್ಕೂ ಕ್ಯಾರೇ ಎನ್ನದ ದಿಟ್ಟತನ, ಅಂಜದೆ ಅಳುಕದೆ ಎಲ್ಲವನ್ನೂ ಎದೆ ಉಬ್ಬಿಸಿಕೊಂಡು ಎದುರಿಸಿದ ಛಲಗಾರ, ವೀರ, ಸರದಾರ!

ಕುರುಚಲು ಗಡ್ಡ, ಮೀಸೆ, ತಲೆಯಲ್ಲಿ ಕಪ್ಪು ಬಣ್ಣದ ನಕ್ಷತ್ರವೊಂದು ಇರುವ ಟೋಪಿ, ಕೈಯಲ್ಲಿ ಸದಾ ಉರಿವ ಕ್ಯೂಬನ್ ಸಿಗಾರ್, ಧರಿಸಿದ ದೊಗಳೆ ಪ್ಯಾಂಟ್-ಶಟ್೯, ಕಣ್ಣುಗಳಲ್ಲಿ ವೈರಿಯನ್ನು ಸುಟ್ಟು ಹಾಕಿ ಬಿಡುವ ಪ್ರಭೆ ಮತ್ಯಾರೂ ಅಲ್ಲ ಅವನೇ ಚಿಗೆವಾರ. ಚಿಗೆವಾರ ಕ್ಯೂಬಾದ ಕ್ರಾಂತಿಯ ಮಹಾನ್ ಕಮ್ಯುನಿಷ್ಟ್ ನಾಯಕ ಹಾಗು ಗೆರಿಲ್ಲಾ ಸಶಸ್ತ್ರ ಹೋರಾಟದ Comrad. ಅವನಿಂದು ಕಮ್ಯುನಿಷ್ಟರ ನೇತಾರನಾಗಿ ಉಳಿಯದೆ ಲೋಕವೇ ಕೊಂಡಾಡುವ ವ್ಯಕ್ತಿತ್ವವಾದ ದಾರಿ ಇದೆಯಲ್ಲಾ, ಅದು ಅತಿ ರೋಚಕ ಹಾಗು ರೋಮಾಂಚಕ ಕಥೆ…


ವೈದ್ಯಕೀಯ ಶಿಕ್ಷಣ ಪಡೆದು ಕೈ ತುಂಬಾ ಹಣ ಸಂಪಾದಿಸಿ, ಐಶಾರಾಮಿ ಆಗಿ ಬದುಕಬಹುದಾಗಿದ್ದ ಚಿಗೆವಾರ ಲಾಟಿನ್ ಅಮೇರಿಕಾದ ಉದ್ದಗಲಕ್ಕೂ ಸಂಚರಿಸಿ ಅದರ ಪರಿಸ್ಥಿತಿ ಕಂಡು ಮರುಗಿದ. ಅಲ್ಲಿದ್ದ ಸಾಮಾಜಿಕ ಅಸಮಾನತೆಯನ್ನು ಕಂಡು ಅದರ ಪರಿಹಾರಕ್ಕೆ ಕ್ರಾಂತಿ ಎಂಬ ಕೆಂಡದ ಹಾದಿಯನ್ನು ಕಂಡುಕೊಂಡಿದ್ದು ನಿಜಕ್ಕೂ ದೊಡ್ಡ ಸಾಹಸವೇ ಆಗಿತ್ತು. ಅರ್ಜೆಂಟಿನಾದಲ್ಲಿ ಜನಿಸಿದರೂ ಕ್ಯೂಬಾ ದೇಶವನ್ನು ಸ್ವತಂತ್ರಗೊಳಿಸಲು ದೊಡ್ಡಣ್ಣ ಅಮೇರಿಕಾವನ್ನೇ ಎದುರು ಹಾಕಿಕೊಂಡು ಹೋರಾಡಲು ಸಿದ್ಧನಾಗಿದ್ದ ತೊಡೆತಟ್ಟಿ, ಬಂದೂಕಿನ ಟ್ರಿಗರ್ ಮೇಲೆ ಬೆರಳಿಟ್ಟು. ಸಶಸ್ತ್ರ ಗೆರಿಲ್ಲಾ ಯುದ್ಧದ ಹಿಂಸಾತ್ಮಕ ಕ್ರಾಂತಿ ಶುರು ಮಾಡಿದ್ದರಿಂದ ಚಿಗೆವಾರನ ಹಲವು ಸಹಚರ ಯೋಧರು ಅಸುನೀಗಬೇಕಾಯಿತು. ಆದರೂ ಧೈರ್ಯಗೆಡದೆ ವೀರಾವೇಷದಿಂದ ಸಶಸ್ತ್ರ ಗೆರಿಲ್ಲಾ ಕ್ರಾಂತಿ ಮಾಡಿ ಕ್ಯೂಬಾದಲ್ಲಿ ಹೊಸ ಪರ್ವಕ್ಕೆ ಮುನ್ನುಡಿ ಬರೆಯಲು ಕಾರಣ ಮತ್ತದೆ ಚಿಗೆವಾರ.


1ಜನವರಿ 1959ರಲ್ಲಿ ಬಟಿಸ್ಟಾನ ದುರಾಡಳಿತದಿಂದ ಮುಕ್ತಿ ನೀಡಿ ಕ್ಯೂಬಾದಲ್ಲಿ ಹೊಸ ಆರಂಭ ಶುರುವಾಯಿತು. ಫಿಡೆಲ್ ಕ್ಯಾಸ್ಟ್ರೋ ಚಿಗೆವಾರನ ಆತ್ಮೀಯ ಗೆಳೆಯ ಅಧಿಕಾರದ ಕುರ್ಚಿಯ ಮೇಲೆ ಕುಳಿತ. ಚಿಗೆವಾರನಿಗೆ ಸರಕಾರದ ಉದ್ಯಮಗಳ ಖಾತೆಯ ಜವಾಬ್ದಾರಿ ನೀಡಲಾಯಿತು.

‘ಚಿ’ ಕ್ರಾಂತಿಯ ಕಿಚ್ಚು ಆರಲಿಲ್ಲ

ಅಧಿಕಾರ ದಾಹ, ಐಶಾರಾಮಿ ಜೀವನ ಶೈಲಿ, ಹಣದ ಹಪಹಪಿಯೇ ಇರದೆ ಕೇವಲ ಕ್ರಾಂತಿಯನ್ನೇ ಮಂತ್ರವಾಗಿಸಿದ್ದ ಚಿ ಕ್ಯೂಬಾಗೆ ಸ್ವಾತಂತ್ರ್ಯ ತಂದಾದ ಮೇಲೂ ಸುಮ್ಮನಿರದೆ ತನ್ನ ಹೋರಾಟ ಮುಂದುವರೆಸಿದ್ದ. ಕಾಂಗೋ ಹಾಗು ಬೊಲಿವಿಯಾದಲ್ಲಿ ಸಮಾಜವಾದಿ ಕ್ರಾಂತಿ ಎಬ್ಬಿಸಲು ಅಣಿಯಾದ. ಅಷ್ಟರಲ್ಲೇ ಹಲ್ಲು ಬಸೆಯುತ್ತಾ ಚಿಗೆವಾರನಿಗೆ ಬಲೆ ಬೀಸಿದ್ದ ಅಮೇರಿಕಾ ಅದರ ಯತ್ನದಲ್ಲಿ ಯಶಸ್ವಿಯಾಗಿ ಅವನನ್ನು ಬಂಧಿಸಿತು‌. ಮರು ದಿನವೇ ‘ಚಿ’ ಪ್ರಾಣವನ್ನು ಒಬ್ಬ ಸಾಮಾನ್ಯ ಸೈನಿಕನಿಂದ ಅಮೇರಿಕಾ ಗುಂಡು ಹಾರಿಸಿ ತೆಗೆಯಲು ನಿರ್ಧರಿಸಿ ಆಗಿತ್ತು. ಬಂದೂಕು ಹಿಡಿದು ಆ ಸೈನಿಕ ನಡುಗುತ್ತಾ ಹೆದರಿ ನಿಂತಾಗ ಸಾವಿಗೇ ಸವಾಲೆಂಬಂತೆ ‘I Know You Are Here To Kill me. Shoot, Coward, You Are Only Going To Kill A Man. I Am Chi Guevara And Worth More To You Alive Than Dead’ ಎಂದು ಜೋರಾಗಿ ಹೇಳಿದ್ದ.

ಸಾವನ್ನೇ ಎದುರಿಗಿಟ್ಟುಕೊಂಡು ಅವನು ತೋರಿದ ತಾಕತ್ತು ಇದೆಯಲ್ಲಾ ಅದು Unimaginable.ಜಗತ್ ಪ್ರಸಿದ್ಧ ಫೋಟೋ ಕ್ಲಿಕ್ಕಿಸಿದ ಸಂದರ್ಭ ಚಿಗೆವಾರನ ಒಂದು ಭಾವಚಿತ್ರ ಇಂದಿಗೂ ವಿಶ್ವ ಖ್ಯಾತಿ ಪಡೆದಿದೆ. ಟಿ-ಶಟ್೯, ಪೆಂಡೆಂಟ್, ಕಾಫಿ ಕಪ್ ಇತ್ಯಾದಿ ಉತ್ಪನ್ನಗಳಲ್ಲಿ ಚಿಗೆವಾರನ ಆ ಫೋಟೋ ಸಾಮಾನ್ಯವಾಗಿ ಕಂಡು ಬರುತ್ತದೆ. ಆ ಫೊಟೋನ ಛಾಯಾಗ್ರಾಹಕ ಅಲ್ಭರ್ಟೋ ಕೊರ್ಡಾ. ಚಿಗೆವಾರ 31ರ ಹರೆಯದಲ್ಲಿದ್ದಾಗ ಕ್ಲಿಕ್ಕಿಸಿದ್ದ ಅದನ್ನು. ಕ್ಯೂಬಾ ದೇಶದ ಹವಾನಾದ ಲಾಕೊವುಬ್ರೆ ಸ್ಪೋಟದಲ್ಲಿ ಮೃತಪಟ್ಟ ಸುಮಾರು 136 ಅಮಾಯಕರ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಚಿಗೆವಾರ ಭಾಗಿಯಾಗಿದ್ದ. ಆ ಸಂದರ್ಭ ಈ ಫೋಟೋ ಕ್ಲಿಕ್ಕಿಸಿದ್ದ ಅಲ್ಭರ್ಟೋ ಕೊರ್ಡಾ.

ಮೂಲೆ ಸೇರಿದ್ದ ಫೋಟೋ ವಿಶ್ವ ಮಾನ್ಯತೆ ಪಡೆವ ಮುನ್ನ!

ಮಾಚ್೯ 5, 1960ರಂದು ತೆಗೆದಿದ್ದ ಚಿಗೆವಾರನ ಫೊಟೋವನ್ನು ಅಲ್ಭರ್ಟೋ ಕೊರ್ಡಾ ಕೆಲಸ ನಿರ್ವಹಿಸುತ್ತಿದ್ದ ಸುದ್ದಿ ಪತ್ರಿಕೆ ಅದರ ವರದಿಯಲ್ಲಿ ಅವನ ಬೇರೆಲ್ಲಾ ಫೊಟೋ ಪ್ರಕಟಿಸಿತ್ತು. ಬೇಸರಗೊಂಡು ಅವನು ಅದನ್ನು ತಂದು ತನ್ನ ಸ್ಟೂಡಿಯೋದ ಗೋಡೆ ಮೇಲೆ ಅಂಟಿಸಿದ್ದ. ಅಲ್ಲಿಂದ ಅಂದರೆ 1960ರಿಂದ 67ರ ತನಕ ಆ ಭಾವಚಿತ್ರ ಹಾಗೆಯೇ ಯಥಾವತ್ತಾಗಿ ಅವನ ಸ್ಟೂಡಿಯೋನ ಗೋಡೆ ಮೇಲೆ ಅಂಟಿಕೊಂಡು ಧೂಳು ಆವರಿಸಿತ್ತು. 1967ರಲ್ಲಿ ಇಟಲಿಯ ಪ್ರಕಾಶಕರಾಗಿದ್ದ ಜಿಯಾಂಜಿಯಾಕೊಮೊ ಫಿಲ್ಟ್ರಿನೆಲ್ಲಿ ಎಂಬಾತ ಕ್ಯೂಬಾ ಸರಕಾರದ ಶಿಫಾರಸ್ಸಿನ ಮೇರೆಗೆ ಒಂದು ಪತ್ರವನ್ನು ಹಿಡಿದುಕೊಂಡು ಬಂದರು. ಅದರಲ್ಲಿ ಚಿಗೆವಾರ ಅವರ ಚೆಂದದ ಭಾವಚಿತ್ರ ಬೇಕಾಗಿತ್ತು ಎಂಬ ಬೇಡಿಕೆ ಇತ್ತು. ತಾನು ತೆಗೆದ ಅತ್ಯುತ್ತಮ‌ ಫೊಟೋ ಈಗಲಾದರೂ ಉಪಯೋಗಕ್ಕೆ ಬರುತ್ತಿದೆಯಲ್ಲಾ ಎಂದು ಕುಷಿಯಿಂದ ಅದನ್ನು ಎರಡು ಪ್ರತಿ ಮಾಡಿ ಆ ಪ್ರಕಾಶಕರಿ್ಎ ಕೊಟ್ಟ. ಚಿಗೆವಾರನ ಅಭಿಮಾನಿಯಾಗಿದ್ದ ಕೊರ್ಡಾ ಆ ಭಾವಚಿತ್ರವನ್ನು ನಯಾಪೈಸೆ ತೆಗೆದುಕೊಳ್ಳದೆ ಉಚಿತವಾಗಿಯೇ ಕೊಟ್ಟು ಬಿಟ್ಟಿದ್ದ.

ವೈರಲ್ ಆಯಿತು ಅದೇ ಫೊಟೋ

ಆಕ್ಟೋಬರ್ 1967ರಲ್ಲಿ ಚಿಗೆವಾರನನ್ನು ಅಮೇರಿಕಾ ಬೊಲಿವಿಯಾದಲ್ಲಿ ಹತ್ಯೆ ಗೈದಾಗುತ್ತಿದ್ದಂತೆ ಅಲ್ಭರ್ಟೋ ಕೊರ್ಡಾ ಅವರು ಕ್ಲಿಕ್ಕಿಸಿದ ಚಿಗೆವಾರನ ಫೊಟೋ ವಿಶ್ವ ಖ್ಯಾತವಾಗಿ ವೈರಲ್ ಆಯಿತು. ಚಿಗೆವಾರನ ಹತ್ಯೆಯನ್ನು ಖಂಡಿಸಿ ಪ್ರಪಂಚದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಈ ಫೊಟೋ ಬಳಕೆ ಆದವು. ಅಲ್ಲಿ ಬಳಸಿದ ಪ್ರತಿಭಟನಾ ಫಲಕ, ಬ್ಯಾನರ್ ಅಲ್ಲಿ ಅಲ್ಭರ್ಟೋ ಕೊರ್ಡಾ ಅವರ ಚಿಗೆವಾರನ ಫೊಟೋ ರಾರಾಜಿಸಿದವು.

ವಿಪರ್ಯಾಸವೆಂದರೆ…

ಆದರೆ ಫಿಡೆಲ್ ಕ್ಯಾಸ್ಟ್ರೋ ‘Berne Convention for the Protection of Literary and Artistic Works’ ಕಾನೂನಿಗೆ ಫಿಡೆಲ್ ಕ್ಯಾಸ್ಟ್ರೋ ಸಹಿ ಮಾಡದಿರುವ ಹಾಗು ಕಾನೂನನ್ನು ಮಾನ್ಯವೆಂದು ಗುರುತಿಸದೆ ಇದ್ದ ಕಾರಣಕ್ಕಾಗಿ ಈ ಭಾವ ಚಿತ್ರಕ್ಕೆ ಕೃತಿ ಸ್ವಾಮ್ಯದ ರಕ್ಷಣೆ ಸಿಗಲಿಲ್ಲ. ಪರಿಣಾಮವಾಗಿ ಫೊಟೋ ಕ್ಲಿಕ್ಕಿಸಿದ ಛಾಯಾಗ್ರಾಹಕನಿಗಾಗಲಿ ಅಥವಾ ಫೊಟೋದ ವಿಷಯವಾಗಿದ್ದ ಚಿಗೆವಾರನ ಕುಟುಂಬಕ್ಕಾಗಲಿ ಆದಾಯ ಬರಲಿಲ್ಲ. ಇಂದಿಗೂ ಯಾರು ಬೇಕಾದರೂ ಈ ಫೊಟೋವನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

error: Content is protected !!