ಮೂರು ಸಿಂಹಗಳಿಗೆ 15 ದಿನದ ಕ್ವಾರೆಂಟೀನ್!

ಬೆಳಗಾವಿ : ಕೊರೊನಾ ಸೋಂಕಿನ ಕಾರಣದಿಂದಗಾಗಿ ಜನರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿದೆ. ಬೇರೆ ಊರಿಂದ ಬಂದ್ರೆ ಅಥವಾ ರೋಗದ ಲಕ್ಷಣ ಇದ್ದವರಿಗೆ ಕ್ವಾರಂಟೈನ್ ಮಾಡುವುದು ಸಹಜ. ಆದರೆ ಬೆಳಗಾವಿಗೆ ಬಂದಿರೋ ಮೂರು ಕಾಡಿನ ರಾಜಗಳಿಗೆ ಅರಣ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.

ಸದ್ಯ ಅವರನ್ನು ನೋಡಲು ಯಾರಿಗೂ ಅವಕಾಶ ಇಲ್ಲ. ಕೇವಲ ಆಹಾರ ನೀಡುವ ಸಿಬ್ಬಂದಿಗೆ ಮಾತ್ರ ಅಲ್ಲಿಗೆ ಪ್ರವೇಶವಿದೆ. ಆದರೆ ಈ ಕಾಡಿನ ರಾಜಗಳನ್ನು ನೋಡಲು ಜನ ಕಾಯುತ್ತಿದ್ದಾರೆ. ಬೆಳಗಾವಿಯ ಭೂತರಾಮನಹಟ್ಟಿ ಗ್ರಾಮದ ಬಳಿ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯವಿದೆ. ಇಲ್ಲಿಗೆ ಇದೀಗ ಮೂರು ಸಿಂಹಗಳನ್ನು ತಂದು ಬಿಡಲಾಗಿದೆ.

ಬೆಂಗಳೂರಿನ ಬನ್ನೇರುಘಟ್ಟದಿಂದ ಎರಡು ಗಂಡು ಹಾಗೂ ಒಂದು ಹೆಣ್ಣು ಸಿಂಹವನ್ನು ತಂದು ಬಿಡಲಾಗಿದೆ.

ವಾತಾವರಣ, ಆಹಾರ ಹೊಂದಾಣಿಕೆ ಆಗೋ ಸಲುವಾಗಿ ಇದೀಗ ಮೂರು ಸಿಂಹಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇದೇ ಸಂಗ್ರಹಾಲಯದಲ್ಲಿ ಪ್ರತ್ಯೇಕವಾಗಿ ಮೂರು ಸಿಂಹಗಳಿಗೆ ಇಡಲಾಗಿದೆ. ಇಲ್ಲಿ ಯಾರಿಗೂ ಪ್ರವೇಶ ನೀಡಿಲ್ಲ, 15 ದಿನ ಈ ಕ್ವಾರಂಟೈನ್ ಅವಧಿಯನ್ನು ಅಧಿಕಾರಿಗಳು ನಿಗದಿ ಮಾಡಿದ್ದಾರೆ.

error: Content is protected !!