ಮೂರು ಲಸಿಕಾ ಕೇಂದ್ರಗಳ ಆರಂಭ

ಎಲ್ಲಾ ಸಾರ್ವಜನಿಕರಿಗೆ ಲಸಿಕೆ ಪಡೆಯಲು ಅನುಕೂಲಕರ ಮಾಡಿಕೊಡುವ ಉದ್ದೇಶದಿಂದ ಸಂತ ಮೈಕಲರ ಶಾಲೆಯಲ್ಲಿ ಲಸಿಕಾಕರಣವನ್ನು ಸ್ಥಗಿತಗೊಳಿಸಿ, ಈ ಕೆಳಕಂಡ ಮೂರು ಕಟ್ಟಡಗಳನ್ನು ಮುಂದಿನ ಆದೇಶದವರೆಗೆ ಕೋವಿಡ್ ಲಸಿಕಾ ಕೇಂದ್ರವನ್ನಾಗಿ ಮಾಡಲಾಗಿದೆ.
ಕಾವೇರಿ ಕಲಾಕ್ಷೇತ್ರ,ನಗರ ಸಭೆ ಪಕ್ಕ, ಮಡಿಕೇರಿ.
ಓಂಕಾರೇಶ್ವರ ದೇವಸ್ಥಾನದ ಓಂಕಾರ ಸದನ, ಮಡಿಕೇರಿ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು,ಮಡಿಕೇರಿ.
ಸಾರ್ವಜನಿಕರು ಈ ಮೂರು ಸ್ಥಳಗಳಿಗೆ ತೆರಳಿ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.