ಮೂರು ಉಗ್ರರ ಹತ್ಯೆ

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಛೆವಾ ಉಲ್ಲರ್ ಎಂಬಲ್ಲಿ ರಕ್ಷಣಾ ಪಡೆಗಳು ಹಾಗು ಉಗ್ರರ ನಡುವೆ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಉಗ್ರರು ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಜಮ್ಮು ಕಶ್ಮೀರ ಪೊಲೀಸರು, ಸೇನೆಯ 42 ರಾಷ್ಟ್ರೀಯ ರೈಫಲ್ಸ್, ಸಿ.ಆರ್.ಪಿ.ಎಫ್ ಪಡೆಗಳು ಈ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತ್ತು. ಇದು ದಕ್ಷಿಣ ಕಾಶ್ಮೀರದಲ್ಲಿ ಜೂನ್ ತಿಂಗಳಲ್ಲಿ ನಡೆದಿರುವ 12ನೇ ಗುಂಡಿನ ದಾಳಿಯಾಗಿದ್ದು, ಈವರೆಗೆ ಅವುಗಳಲ್ಲಿ 33 ಜನ ಉಗ್ರರ ಹತ್ಯೆ ಮಾಡಲಾಗಿದೆ.