ಮೂಗು ಮುಚ್ಚಿಕೊಂಡೂ ಕೂಡ ಬಳಸಲಾಗದಷ್ಟು ಗಬ್ಬು ನಾರುತ್ತಿದೆ ಶೌಚಾಲಯ!

ಸೋಮವಾರಪೇಟೆ ತಾಲ್ಲೂಕಿನ ಕೇಂದ್ರ ಸ್ಥಾನದ ಪಟ್ಟಣ ಒಂದಲ್ಲಾ ಒಂದು ಅವ್ಯವಸ್ಥೆಯ ಕೇಂದ್ರ ಬಿಂದು ಆಗುತ್ತಲೇ ಇದೆ,ಇದಕ್ಕೆ ಸಾಕ್ಷಿ ಎನ್ನುವಂತೆ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಸಾರ್ವಜನಿಕ ಶೌಚಾಲಯ.

ಹೆಸರಿಗಷ್ಟೇ ಶೌಚಾಲಯವಾಗಿದ್ದು ನಲ್ಲಿಗಳಲ್ಲಿ ನೀರು ಬಾರದೆ ಅದೆಷ್ಟೋ ದಿನಕಳೆದಂತಿದೆ, ಇಲ್ಲಿನ ಶೌಚಗಳಿಗೆ ಚಿಲ್ಕ ಸಹ ಇಲ್ಲ,ಎಲ್ಲೆಂದರಲ್ಲಿ ಮದ್ಯದ ಪೊಟ್ಟಣಗಳು, ಪೆನಾಯಿಲ್ ಕಾಣದೆ ಗಬ್ಬು ನಾರುತ್ತಿದೆ.

ಪುರುಷರು ಮತ್ತು ಮಹಿಳೆಯರ ಅನುಕೂಲಕ್ಕೆ ತಕ್ಕಂತೆ ಸುಸ್ಸಜ್ಜಿತ ವಾಗಿ ನಿರ್ಮಾಣ ಮಾಡಲಾಗಿದ್ದರೂ ಹೇಳುವವರಿಲ್ಲ ಕೇಳುವವರಿಲ್ಲದೆ ಈ ಸ್ಥಿತಿ ತಲುಪಿದೆ. ಇದರ ಪರಿಣಾಮ ಅವಸರವಾದರೆ, ಒಂದಷ್ಟು ಸುಚಿತವಾಗಿರುವ ಸಾರಿಗೆ ಬಸ್ ನಿಲ್ದಾಣದ ಶೌಚಾಲಯವನ್ನು, ಸಾರ್ವಜನಿಕರು, ಪ್ರಯಾಣಿಕರು ಅವಲಂಭಿಸುತ್ತಿದ್ದಾರೆ. ಕಾಮಗಾರಿಯ ಹೆಸರಿನಲ್ಲಿ ಸರ್ಕಾರದ ಹಣ ಲೂಟಿ ಮಾಡಿ ನಿರ್ಮಾಣ ಮಾಡುವ ಇಂತಹಾ ಯೋಜನೆಗಳು, ಬಳಿಕ ನಿರ್ವಹಣೆ ಇಲ್ಲದೆ ಮೂಲೆ ಗುಂಪಾಗುವುದಕ್ಕೆ ಈ ಶೌಚಾಲಯ ಸಾಕ್ಷಿ.

error: Content is protected !!