ಮುಸ್ಲಿಮರ ಸ್ವಯಂ ಘೋಷಿತ ಬಂದ್ ಹಲವೆಡೆ ಯಶಸ್ವಿ

ಹಿಜಾಬ್ ಕುರಿತು ಹೈಕೋರ್ಟ್ ತೀರ್ಪಿಗೆ ಅಸಮಧಾನಗೊಂಡು ಮುಸ್ಲಿಂ ಸಂಘಟನೆ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿಯಲ್ಲಿ ಸಂಪೂರ್ಣ ಬೆಂಬಲ ದೂರೆತಿದೆ.
ಮುಸ್ಲಿಮರ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಕುಶಾಲನಗರ ಪಟ್ಟಣದಲ್ಲೂ ಮುಸ್ಲಿಮರ ಅಂಗಡಿಗಳು ಸ್ವಯಂಘೋಷಿತವಾಗಿ ಮುಚ್ಚಲ್ಪಟ್ಟಿದ್ದು, ಜನರು ಅಗತ್ಯ ವಸ್ತುಗಳಿಗೆ ಪರದಾಡುವಂತಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ನಾಪೋಕ್ಲು ಬಂದ್ ಆಗಿದೆ.