fbpx

ಮುಖ್ಯ ರಸ್ತೆಯಲ್ಲಿನ ತಡೆಗೋಡೆ ಶಿಥಿಲಾವಸ್ಥೆ ತಲುಪಿದೆ!

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಯಿಂದ ಮಡಿಕೇರಿಯನ್ನು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ತಡೆಗೋಡೆ ದಿನೇ ದಿನೇ ಕುಸಿಯುತ್ತಿದ್ದು ,ಮಂದಿನ ದಿನಗಳಲ್ಲಿ ಸಂಪರ್ಕವೇ ಕಡಿತಗೊಳ್ಳುವ ಲಕ್ಷಣವಿದೆ.

ಈ ಹಿಂದೆ ಕಾಂಕ್ರಿಟ್ ತಡೆಗೋಡೆ ಮೂಲಕ ತಾತ್ಕಾಲಿಕ ವಾಗಿ ಸಂಚಾರಕ್ಕೆ ರಸ್ತೆ ಮರು ವರ್ಷದಲ್ಲೇ ಗೋಡೆ ಕುಸಿದು ಬಿದ್ದು ಸಂಪರ್ಕವೇ ಕಡಿತಗೊಂಡಿತ್ತು, ಇದಾದ ಬಳಿಕ ಪ್ರಸಕ್ತ ವರ್ಷ ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ಕುಸಿಯುವ ಭೀತಿಯಿಂದ ಕಬ್ಬಿಣದ ಸಲಿಕೆಯಲ್ಲಿ ಬೃಹತ್ತಾದ ಕಲ್ಲುಗಳು ಜೋಡಿಸಿ ನೂತನ ತಂತ್ರಜ್ಞಾನದ “ಗೇಬಿಯನ್ನ್” ಮಾದರಿಯ ತಡೆಗೋಡೆಯನ್ನು ನಿರ್ಮಿಸಲು ಕೇರಳದ ಇರ್ಟಿಯ ಗುತ್ತಿಗೆದಾರರಿಗೆ ನೀಡಲಾಗಿತ್ತು, ನಿರ್ಮಿಸಿರುವ ಕೆಲವೇ ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಗೋಡೆ ತಳ ಭಾಗದಲ್ಲಿ ಬಿರುಕು ಬಿಟ್ಟು ಕುಸಿಯುತ್ತಿದ್ದು, ಸಂಬಂಧಪಟ್ಟ ಎಂಜಿನಿಯರ್ ಗಳಿಗೆ ಸ್ಥಳೀಯರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

error: Content is protected !!