ಮುಂದುವರೆದ ಹಿಜಾಬ್ ವಿವಾದ

ಮಡಿಕೇರಿಯಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ.
ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಐವರು ವಿದ್ಯಾರ್ಥಿನಿರು ಕಾಲೇಜಿಗೆ ಪ್ರವೇಶ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಆಡಳಿತ ಮಂಡಳಿ ತಡೆ ಮಾಡಿದ್ದರಿಂದ ಮೊದಲೇ ಸಿದ್ಧ ಪಡಿಸಿಕೊಂಡಿದ್ದ ನಾಮಫಲಕ ಹಿಡಿದು ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಅಚ್ಚರಿ ಎನ್ನುವಂತೆ ನಿನ್ನೆಯ ದಿನ ಪ್ರತಿಭಟನೆಯಲ್ಲ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರ ಪೈಕಿ ಎಲ್ಲರೂ ಅನಾರೋಗ್ಯ ಕಾರಣ ನೀಡಿ ಕಾಲೇಜಿಗೆ ಹಾಜರಾಗಿಲ್ಲ.