fbpx

ಮುಂದುವರಿದ ಮಳೆಯಿಂದ ಜೋರಾದ ಆತಂಕ

ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಈವರೆಗೆ ಚೇತರಿಕೆ ಕಂಡು ಬಂದಿಲ್ಲ, ಆಗಿಂದಾಗ್ಗೆ ಪ್ರವಾಹ, ಗುಡ್ಡಕುಸಿತದ ಬಗ್ಗೆ ವರದಿಗಳು ಕೇಳಿ ಬರುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಗುಡ್ಡಕುಸಿತದ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತದೆ ಈ ನಡುವೆ ಬಿಎಸ್ ಎನ್ ಎಲ್ ಸಂಸ್ಥೆ ಮಾಡುತ್ತಿರುವ ಆವಾಂತರ ಅಷ್ಟಿಷ್ಟಲ್ಲ.ಕೇರಳದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ ತಾಲ್ಲೂಕಿನ ಪೆರುಂಬಾಡಿಯಿಂದ ಮಾಕುಟ್ಠ ಚೆಕ್ ಪೋಸ್ಟ್ ವರೆಗಿನ ಮಾರ್ಗ ದಲ್ಲಿ ಕೇಬಲ್ ಕಾಮಗಾರಿ ನಡೆಯುತ್ತಿದ್ದು, ಆತಂಕ ಸೃಷ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಸಾಕಷ್ಟು ಭೂಕುಸಿತ ಉಂಟಾದ ಈ ಮಾರ್ಗದಲ್ಲಿ ಇದೀಗ ಸುರಿಯುತ್ತಿರುವ ಮಳೆಯಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಲಕ್ಷಣಗಳಿದ್ದು, ಕಾಮಗಾರಿ ನಡೆಸುತ್ತಿರುವ ಬಿ.ಎಸ್.ಎನ್.ಎಲ್ ಸಂಸ್ಥೆಗೆ ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ.

error: Content is protected !!