ಮೀನು ಹಿಡಿದರೆ ಕ್ರಮ

ಕೊಡಗು: ಹಾರಂಗಿ ಜಲಾಶಯದಿಂದ ಗರಂಗದೂರಿನ ಹಾರ್ ಬೈಲ್ ಪ್ರದೇಶದ ಹಿನ್ನೀರಿನಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಮೀನು ಬಿಡಲಾಗಿದ್ದು ಅಕ್ರಮವಾಗಿ ಮೀನು ಬೇಟೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಕಾವೇರಿ ಮೀನುಗಾರಿಕೆ ಸಹಕಾರ ಸಂಘ ಎಚ್ಚರಿಕೆ ನೀಡಿದೆ.ಜಲಾಶಯದ ಹಿನ್ನೀರಿನಲ್ಲಿ ಸಂಘವು ಸರ್ಕಾರದಿಂದ ಅಧಿಕೃತ ಗುತ್ತಿಗೆ ಪಡೆದು ಮೀನು ಮರಿಗಳನ್ನು ಬಿಡಲಾಗಿದ್ದು,2021ರ ಮಾರ್ಚ್ ರವರೆಗೆ ಸಂಘದ ಗುತ್ತಿಗೆಯಿದ್ದು,ಕಳೆದ ವರ್ಷ ಬಲೆ ಮತ್ತು ತೆಪ್ಪದ ಮೂಲಕ ಹಲವು ಕಳ್ಳತನ ನಡೆದಿದ್ದು ಇದರಿಂದ ಸಂಘಕ್ಕೆ ನಷ್ಟ ಉಂಟಾಗಿದೆ ,ಈ ಭಾರಿ ಮುಂದುವರೆದರೆ ಪೋಲಿಸರ ಮೂಲಕ ದಾಳಿ ನಡೆಸಿ ಮೀನು ಹಿಡಿಯಲು ಬಳಸುವ ಪರಿಕರ,ಹರಿಗೋಲು ವಶ ಪಡೆಸಿಕೂಳ್ಳುವುದಲ್ಲದೆ ಸಂಬಂಧಪಟ್ಪವರ ಮೇಲೆ ಮೂಕದ್ದಮೆ ದಾಕಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.