fbpx

ಮೀನು ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅಂಗಾರ

ಪ್ರಸಕ್ತ ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ 70 ಲಕ್ಷ಼ದಷ್ಟು ಮೀನಿನ ಕೃಷಿ ಮಾಡುವ ಗುರಿ ಹೊಂದಿದ್ದೇವೆ. ಮೀನು ಕೃಷಿ ಸಂಬಂಧ ಕೇಂದ್ರದ ಆತ್ಮನಿರ್ಭರ್ ಯೋಜನೆಯಡಿಯಲ್ಲಿ ಕೃಷಿಕರಿಗೆ ಅನುದಾನ ನೀಡಲಾಗುತ್ತಿದೆ.

ಒಳನಾಡು ಬಂದರು ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಸ್ವಂತ ಕೆರೆಯಿರುವ ರೈತರು ಮತ್ತು ಉಪ ಬೆಳೆಯ ರೀತಿಯಲ್ಲಿ ರೈತರು ಆತ್ಮ ನಿರ್ಭಹರ್ ಯೋಜನೆ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮೀನುಗಾರಿಕೆ ಮತ್ತು ಒಳನಾಡು ಬಂದರು ಸಚಿವ ಅಂಗಾರ ಹಾರಂಗಿಯಲ್ಲಿ ತಿಳಿಸಿದ್ದಾರೆ.

ಮೀನುಗಾರಿಕೆ ಇಲಾಖೆಯಿಂದ ಹಾರಂಗಿ ನದಿಗೆ ಬಿಡಲಾಗುವ ಮಹಷೀರ್ ಮೀನುಗಳ ರಕ್ಷಣೆಗೆ ಕ್ರಮ ಗೊಳ್ಳುವ ಕುರಿತು ಮಾತನಾಡಿದ ಅವರು
ಅಕ್ರಮ ಬೇಟೆ ತಡೆಯುವ ನಿಟ್ಟಿನಲ್ಲಿ ನದಿ ಪಾತ್ರದಲ್ಲಿ ಕಾಡು ಕಡಿದು ಬೇಲಿ ನಿರ್ಮಿಸುವ ಚಿಂತನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಮೀನು ಕೃಷಿ ಮಾಡುವ ರೈತರಿಗೆ ಸಹಯವಾಣಿ ತೆರೆಯಲಾಗಿದೆ. ಒಳನಾಡು ಮೀನು ಕೃಷಿಕರಿಗಿಂತ, ಕರಾವಳಿ ಮೀನುಗಾರರಿಗೆ ಸಾಕಷ್ಟು ಸಮಸ್ಯೆಗಳಿದೆ ಕೊಡಗಿನಂತ ಒಳನಾಡು ಪ್ರದೇಶದ ರೈತರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಇದೇ ವೇಳೆ ತಿಳಿಸಿದ್ದು, ಮೀನು ಉತ್ಪನ್ನ ಕೇಂದ್ರಗಳಿಗೆ ಭೇಟಿ ನೀಡಿದರಲ್ಲದೆ ಹಾರಂಗಿ ನದಿಗೆ ಮೀನು ಮರಿಗಳನ್ನು ಜಲಾಶಯದ ಕೆಳ ಸೇತುವೆ ಬಳಿ ಬಿಡಲಾಯಿತು. ಬಳಿಕ ಹಾರಂಗಿ ಜಲಾಶಯಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು.

error: Content is protected !!