ಮೀನು ಪಾಶುವಾರು ಹಕ್ಕು; ಮೀನುಗಾರಿಕೆ ನಡೆಸದಂತೆ ಸೂಚನೆ

ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಮೀನು ಪಾಶುವಾರು ಹಕ್ಕು 2022 ರ ಜೂನ್‍ಗೆ ಮುಕ್ತಾಯಗೊಂಡಿದೆ.

ಹಾರಂಗಿ ಜಲಾಶಯದ ಮೀನು ಪಾಶುವಾರು ಹಕ್ಕು/ ವಿಲೇವಾರಿ ವಿಧಾನದ ವಿಷಯವು ಸರ್ಕಾರದ ಹಂತದಲ್ಲಿದ್ದು, ಮುಂದಿನ ವಿಲೇವಾರಿ ಆದೇಶ ಬರುವವರೆಗೂ ಹಾರಂಗಿ ಜಲಾಶಯದಲ್ಲಿ ಯಾವುದೇ ರೀತಿಯ ಮೀನುಗಾರಿಕೆ ನಡೆಸಬಾರದು ಎಂದು ಸೋಮವಾರಪೇಟೆ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಸಚಿನ್ ಅವರು ತಿಳಿಸಿದ್ದಾರೆ.

error: Content is protected !!