ಮಾ.20ರಿಂದ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್

ಪೊನ್ನಂಪೇಟೆ, ಮಾ.15: ಪ್ರತಿವರ್ಷ ನಡೆಯುವ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ಇದೇ ತಿಂಗಳ 20ರಿಂದ 22ರವರೆಗೆ ಜರುಗಲಿದೆ. ವಿರಾಜಪೇಟೆ ಸಮೀಪದ ಗುಂಡಿಕೆರೆಯ ದರ್ಗಾ ಶರೀಫ್ ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾರವರ ಹೆಸರಿನಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಗುಂಡಿಕೆರೆ ಮಖಾಂ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಗುಂಡಿಕೆರೆ ಜಮಾಅತಿನ ಆಡಳಿತ ಮಂಡಳಿ, 3 ದಿನಗಳ ಕಾಲ ನಡೆಯಲಿರುವ ಉರೂಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದೆ.
ಉರೂಸ್ ನಡೆಯುವ 3 ದಿನಗಳ ಕಾಲವೂ ಮಗ್ರಿಬ್ ನಮಾಜಿನ ನಂತರ ದಫ್ ಕಾರ್ಯಕ್ರಮವಿರುತ್ತದೆ. ಎಲ್ಲಾ ದಿನಗಳ ಕಾರ್ಯಕ್ರಮಗಳಿಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.