ಮಾ.17ರಂದು ‘ಸತ್ಯದ ಸ್ವಾಮಿ ಕೊರಗಜ್ಜ’ ಯಕ್ಷಗಾನ ಪ್ರದರ್ಶನ

ಮಡಿಕೇರಿ: ಮದೆನಾಡು ಮಾತೃ ಭಾರತಿ ಸಾಂಸ್ಕೃತಿಕ ಕಲಾ ವೇದಿಕೆ, ಜಿಲ್ಲಾ ತುಳುವೆರ ಜನಪದ ಕೂಟ ಮತ್ತು ಮುದ್ದ ಕಳಲ ಯುವಕ ಸಂಘದ ಸಹಯೋಗದಲ್ಲಿ ಮಾ.17ರಂದು ‘ಸತ್ಯದ ಸ್ವಾಮಿ ಕೊರಗಜ್ಜ’ ಯಕ್ಷಗಾನ ಬಯಲಾಟ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಇಂದ್ರಾಜೆ ವಿದ್ಯಾಶ್ರೀ ಯಕ್ಷಗಾನ ಕಲಾ ಸಂಘದಿಂದ
ಮದೆ ಗ್ರಾಮ.ಪಂ ವ್ಯಾಪ್ತಿಯ ಗೋಳಿಕಟ್ಟೆ ಪುನರ್ವಸತಿ ಬಡಾವಣೆಯಲ್ಲಿ ರಾತ್ರಿ 9:30ಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅದಕ್ಕೂ ಮೊದಲು ಸಭಾ ಕಾರ್ಯಕ್ರಮ ನಡೆಯಲಿದ್ದು, ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಉದ್ಘಾಟಿಸಲಿದ್ದು, ಮದೆ ಗ್ರಾ.ಪಂ ಸದಸ್ಯ ನಡಗಲ್ಲು ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!