ಮಾ.10 ರಂದು ವಿದ್ಯುತ್ ವ್ಯತ್ಯಯ

ಮಡಿಕೇರಿ ಮಾ.09: ಕುಶಾಲನಗರ 220/11 ಕೆ.ವಿ. ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಹೆಬ್ಬಾಲೆ ಫೀಡರ್‍ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮಾರ್ಚ್, 10 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಹೆಬ್ಬಾಲೆ, ಬನಶಂಕರಿ ದೇವಸ್ಥಾನದ ಹತ್ತಿರ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

error: Content is protected !!