ಮಾನವ ಹತ್ಯೆಗೂ,ಹೆಣ್ಣು ಹುಲಿಗೆ ಸಂಬಂಧವಿಲ್ಲ

ಕೊಡಗು: ನಾಲ್ಕೇರಿ ಮತ್ತು ಟಿ.ಶೆಟ್ಟಿಗೇರಿಯಲ್ಲಿ ಕಾರ್ಮಿಕರ ಮೇಲೆ ನಡೆದ ಹುಲಿ ದಾಳಿಗೂ,ಈಗಾಗಲೇ ಸೆರೆಯಾಗಿ ಮೈಸೂರಿನ ಮೃಗಾಲಯದಲ್ಲಿರುವ ಹೆಣ್ಣು ಹುಲಿಗೂ ಸಂಬಂಧವಿಲ್ಲ ಎಂದು ರಾಜ್ಪ್ರಧಾನ ಅರಣ್ಯ (ವನ್ಯಜೀವಿ) ಸಂರಕ್ಷಾಣಾಧಿಕಾರಿ ವಿಜಯಕುಮಾರ್ ಗೋಗಿ ಸ್ಪಷ್ಟನೆ ಪಡೆಸಿದ್ದಾರೆ.ಸೆರೆಯಾದ ಹೆಣ್ಣು ಹುಲಿಯ ವೈದಕೀಯ ಪರೀಕ್ಷೆ ವರದಿ ಹೊರಬಂದಿದ್ದು,ಹುಲಿಯ ರಕ್ತ ಪರೀಕ್ಷೆ ವೇಳೆ ಮಾನವ ಹತ್ಯೆಯಲ್ಲಿ ಹೆಣ್ಣು ಹುಲಿಯ ಪಾತ್ರವಿಲ್ಲ ಎಂಬುದು ಖಚಿತಗೊಂಡಿದೆ.ಆದರೆ ಈ ಹೆಣ್ಣು ಹುಲಿ 2012ರಿಂದ ಹಲವು ಜಾನುವಾರುಗಳ ದಾಳಿ ಪ್ರಕರಣದಲ್ಲಿ ಇದೇ ಹೆಣ್ಣು ಹುಲಿಯ ಬಗ್ಗೆ ಕ್ಯಾಮರಾದಲ್ಲಿ ಚಹರೆ ಸೆರೆಯಾಗಿದೆ.