ಮಾನವೀಯತೆ ಮಿಡಿದ ವಿ.ಸೋಮಣ್ಣ

ಕೋವಿಡ್-19 ಸೋಂಕಿನ ಸಂಬಂಧದಲ್ಲಿ ಕೊಡಗು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಸತಿ ಸಚಿವರಾದ ವಿ.ಸೋಮಣ್ಣ ಅವರು ಭಾನುವಾರ ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಬೆಂಚಿನ ಮೇಲೆ ಕುಳಿತ ಓರ್ವ ಮಹಿಳೆ ತನ್ನ ಎಳೆಯ ಕಂದಮ್ಮನನ್ನು ಮಡಿಲಲ್ಲಿ ಮಲಗಿಸಿಕೊಂಡು ಅಸಹಾಯಕರಾಗಿದ್ದನ್ನು ಕಂಡು ಸಚಿವರು ಆಕೆಯತ್ತ ಆತಂಕದಿಂದ ಧಾವಿಸಿದರು.
ಬ್ಯಾಂಕ್ ಸಿಬ್ಬಂದಿಯೊಬ್ಬರ ಪತ್ನಿಯಾದ ಆಕೆಯ ಪತಿ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಶಿಶು ಜ್ವರದಿಂದ ಬಳಲುತ್ತಿತ್ತು. ತಕ್ಷಣವೇ ಶಿಶುತಜ್ಞರನ್ನು ಕೂಗಿ ಕರೆದ ಸಚಿವರು, ತಾಯಿ ಮಗುವಿನ ಆರೈಕೆ ಮಾಡಲು ಸೂಚಿಸಿದರು. ವೈದ್ಯರು ಭರವಸೆ ಕೊಟ್ಟ ನಂತರ, ಧೈರ್ಯದಿಂದಿರುವಂತೆ ಮಹಿಳೆಗೆ ಹೇಳಿ ಅಲ್ಲಿಂದ ತೆರಳಿದರು.
ಕೂಡಿಗೆ ಕೋವಿಡ್ ಆರೈಕೆ ಕೇಂದ್ರಕ್ಕೆ ಸಚಿವರ ಭೇಟಿ:
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಭಾನುವಾರ ಕೂಡಿಗೆ ಬಳಿಯ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವವರಿಗೆ ನೀಡಲಾಗುವ ಆರೋಗ್ಯ ಕಿಟ್ ಪರಿಶೀಲಿಸಿದರು. ಕೋವಿಡ್ ಸೋಂಕಿತರಿಗೆ ಕಾಲಕಾಲಕ್ಕೆ ಗುಣಮಟ್ಟದ ಬಿಸಿ ಆಹಾರ ಪೂರೈಸಬೇಕು. ಬಿಸಿ ನೀರು ಒದಗಿಸಬೇಕು. ಸಣ್ಣ ಅಪಚಾರ ಉಂಟಾಗದಂತೆ ಮುನ್ನೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.