ಮಾಜಿ ಕ್ರಿಕೆಟಿಗ ಗಂಭೀರ್ ಅವರಿಂದ ‘ಜನ್ ರಸೋಯಿ’ ಆರಂಭ!

ನವದೆಹಲಿ: ಅಮ್ಮ-ಇಂದಿರಾ ಕ್ಯಾಂಟೀನ್‌ಗಳ ಮಾದರಿಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿಯ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಬಡವರಿಗೆ 1 ರೂಪಾಯಿಗೆ ಊಟವನ್ನು ಪೂರೈಸುವ ‘ಜನ್ ರಸೋಯಿ’ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದಾರೆ.

ಗಾಂಧಿನಗರದಲ್ಲಿ ಗುರುವಾರ ಮೊದಲ ಕ್ಯಾಂಟೀನ್‌ಅನ್ನು ಗಂಭೀರ್ ಉದ್ಘಾಟಿಸಿದರು. ಅಶೋಕ್ ನಗರದಲ್ಲಿ ಗಣರಾಜ್ಯೋತ್ಸವದ ದಿನ ಇನ್ನೊಂದು ಕ್ಯಾಂಟೀನ್ ಆರಂಭಗೊಳ್ಳಲಿದೆ. ಪೂರ್ವ ದೆಹಲಿಯ 10 ಅಸೆಂಬ್ಲಿ ಕ್ಷೇತ್ರದಲ್ಲೂ ಕನಿಷ್ಠ 1 ‘ಜನ್ ರಸೋಯಿ’ ಆರಂಭಿಸುವುದು ಗಂಭೀರ್ ಅವರ ಯೋಜನೆಯಾಗಿದೆ.

error: Content is protected !!