ಮಹಿಳೆ ಆತ್ಮಹತ್ಯೆ

ಮೂರ್ನಾಡು: ಎಸ್.ಬಿ.ಐ ಬ್ಯಾಂಕ್ ಬ್ರಾಂಚಿನ ಉದ್ಯೋಗಿ
ವಿದ್ಯಾರಕ್ಷ್ಮಿ ಎಂಬ 26 ವರ್ಷದ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮೂರ್ನಾಡುವಿನಲ್ಲಿ ತಂಗಿದ್ದ ರೂಮಿನಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆ ಕಳುಹಿಸಲಾಗಿದೆ.