ಮಹಿಳೆಯೊಂದಿಗೆ ಅಶ್ಲೀಲ ಚಾಟಿಂಗ್ ಯುವಕ ಪೊಲೀಸರ ವಶಕ್ಕೆ

ವಿವಾಹಿತ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದ ಯುವಕನನ್ನು ಉಪಾಯದಿಂದ ಕರೆಸಿಕೊಂಡು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ಸಮೀಪದ ಹಾಕತ್ತೂರಿನ ಹರ್ಷದ್ ಎಂಬ ಯುವಕ ಕಳೆದ ೧೫ ದಿನಗಳಿಂದ ಮಹಿಳೆಯೊಬ್ಬರ ಜೊತೆ ಯುವತಿಯ ಹೆಸರು ಹೇಳಿಕೊಂಡು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಚಾಟಿಂಗ್ ಆರಂಭಿಸಿದ್ದ, ನಂತರ ಹೇಗೋ ಮಹಿಳೆಯ ಮೊಬೈಲ್ ನಂಬರ್ ಸಂಗ್ರಹಿಸಿ ಅಶ್ಲೀಲವಾಗಿ ಮೆಸೇಜ್ ಹಾಗೂ ವಿಡಿಯೋ ರವಾನಿಸುತ್ತಿದ್ದ ಎನ್ನಲಾಗಿದೆ. ಮಹಿಳೆ ಈ ರೀತಿ ಮೆಸೇಜ್ ಕಳುಹಿಸಬೇಡ ಎಂದು ಎಚ್ಚರಿಕೆ ನೀಡಿದರೂ ಯುವಕ ಚಾಟಿಂಗ್ ಮುಂದುವರೆಸಿದ್ದ.

ಬಳಿಕ ಯುವಕನನ್ನು ಮಡಿಕೇರಿಗೆ ಬರಮಾಡಿಕೊಂಡು ಸರಕಾರಿ ಬಸ್ ನಿಲ್ದಾಣದಲ್ಲಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದಲ್ಲದೆ ಬೇರೆ ಹುಡುಗಿಯರ ಮೊಬೈಲ್ ಸಂಖ್ಯೆ ನೀಡಿದರೆ, ಹಣ ನೀಡುವುದಾಗಿ ಹೇಳುತ್ತಿದ್ದ ಎಂದು ಮಹಿಳೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!