fbpx

ಮಳ್ಗಾಲದ ಅತಿಥಿಗ -೧

✍🏻ವಿನೋದ್ ಮೂಡಗದ್ದೆ

ಮಳೆ ತೇಳ್ರೆ ಯಾರಿಗೆ ತಾನೆ ಕುಸಿ ಇಲ್ಲೆ ಹೇಳಿ? ಸುರೂನ ಮಳೆ ಬೀಳ್ಕನ ಬಾವ ಮಣ್ಣ್’ನ ಪೊರ್ಮಳಕೆ ಎಷ್ಟ್ ಜನ ಕಾದ್’ಕಂಡ್ ಇರ್ದುಲೆ..!!

ಮತ್ತೊಂದು‌ ಕಡೆ ನೋಡ್ರೆ ಗದ್ದೆ, ತೋಟ ಕೆಲ್ಸ ತ ಎಲ್ಲವೂ ಅತ್ತ ಹೊರ್ಟವೆ. ಇನ್ನ್ ಮಳ್ಗಾಲಲಿ ಬಟ್ಟೆ ಒಣ್ಗುಸುದರ ಪಾಡ್ ಹೇಳಿ ಸುಖ ಇಲ್ಲೆ. ಇನ್ನ್ ಚೆಂಡಿ ಸೌದೆನ ತಂದ್ ಹೆಣ್ಣ್ ಮಕ್ಕ ಒಲೆಬುಡಲಿ ಕಣ್ಣ್’ಲಿ ನೀರ್ ಹರ್ಸಿಕಂಡ್ ಕಿಚ್ಚಿ ಮಾಡ್ದಂತು ತಪ್ಪುದೇಲೆ.

ಇಷ್ಟೆಲ್ಲ ಇರ್ಕನ ಮಾಮೂಲ್’ನಂಗೆ ಲಾಯ್ಕಲಿ ಹೊರ್ಟ್ ಪೇಟೆಗೆ ಸಂತೆಗೆ ಹೋಕೆ ಉಟ್ಟ? ಪ್ರಕೃತಿಲಿ ಸಿಕ್ಕುವ ಅಪರೂಪದ ವಿಶೇಷ ಖಾದ್ಯಗಳೇ ಮಳ್ಗಾಲದ ಗಮ್ಮತ್ತ್..ಮಳೆ ಸುರು ಆಗ್ತಾ ಇದ್ದಂಗೆ ಅಲ್ಲಲ್ಲಿ ಗದ್ದೆ ಪುಣಿಲಿ, ಹುತ್ತ ಕರೆಲಿ ನಾನಾ ತರದ ಅಳ್ಂಬುಗ ಎದ್ರಿಕೆ‌ ಸುರು‌ ಆದೆ, ಬಿದಿರ್ ಬುಡಲಿ ಸಣ್ಣ ಕಣಿಲೆ‌ಗ ಹೊರ್ಟ್’ಕಂಡ್ ಮೇಲೆ ಬಂದವೆ, ಚೋಡಿ ಕರೆಲಿ ಸಿಕ್ಕುವ ಚರ್ಮೆ, ಕೆಂಪು ಕೆಸ, ಕೆಸನಗೆಂಡೆ, ಕಾಡ್’ಲಿ ಬಳ್ಳಿಯಾಗಿ ಹಬ್ಬಿ ಸಣ್ಣ ಹಾಗಲ ಕಾಯಿಯಂಗೆ ಇರುವ ಮಾಡ್ಹಾಗಲ, ಗಿಣ್ಕೆ ಸೊಪ್ಪು, ಚಗ್ತೆ ಸೊಪ್ಪು ಹಿಂಗೆ ಇನ್ನಷ್ಟ್ ಪದಾರ್ಥಗ ನಾವ್ಗೆ ಸಿಕ್ಕಿದೆ.

ಅದೂ ಅಲ್ಲದೆ ಸುರುನ ಮಳೆಗೆ ಮೀನ್ ಉಬರ್ ಹತ್ತಿದೆ, ಆಗ ಪೊಡ‌, ಕೂಣಿ ಇಸಿ ಮೀನ್, ಎಸಂಡ್ ಹಿಡಿಯದು, ಕತ್ತಲೆಗೆ ಎಸಂಡ್, ಮೀನ್ ಕಡಿಯಕೆ ಹೋದ್ ಹಿಂಗೆ ಮಳ್ಗಾಲದ ಗೈಪುಗೆ ಬೇಕಾದರ ಮಾಡಿಕಂಡವೆ..

ಈ ಸರಣಿಲಿ ನಾವ್ ಒಂದೊಂದು ಮಳ್ಗಾಲದ ನೆಂಟ್ರ್’ಗಳ ಪರಿಚಯ ಮಾಡಿಕಂಡ್ ಪೋಯಿ..

ಸುರುನ ಸಂಚಿಕೆಲಿ ಅಳ್ಂಬುಗಳ ಬಗ್ಗೆ ತಿಳ್ಕಣಮೊ..

೧. ನಾಯಿ ಮರಿ ಅಳ್ಂಬು

ನಾಯಿ ಮರಿ/ ನಾಯಿ ಕೊಡೆ, ಇದ್ ಹೆಚ್ಚಾಗಿ ಗದ್ದೆ ಪುಣಿಗಳ್ಲಿ, ಹುತ್ತದ ಕರೆಲಿ ಎದ್ದದೆ‌‌. ಈ ಅಳ್ಂಬು ಒಂದೇ ಜಾಗೆಲಿ ಒಂದು, ಇಲ್ಲೆ ತೇಳ್ರೆ ಎರಡ್ ಮಾತ್ರ ಎದ್ದದೆ‌‌.. ಇಡೀ ಗದ್ದೆ, ತೋಟ ಸುತ್ತಿ ಬಾಕನ ೧೦-೨೦ ಸಿಕ್ಕಿರೆ ಹೆಚ್ಚ್.. ಇದ್ ಕೇರಂ ಆಟದ ಪಾನ್ ಅಷ್ಟ್ ಸಣ್ಣದರ್ಂದ ಹಿಡ್ದ್ ಅಂಗೈ ಅಷ್ಟ್ ಅಗಲದವರೆಗೆ ಬೆಳ್ದದೆ‌‌. ಹಂಞ ಬೂದು ಬಣ್ಣದ ಇದರ ತಲೆಲಿ ಲೋಳೆ ಇದ್ದದೆ, ಕೆಲವ್ ಜನ ಅದರ ಪೂರಾ ಕೆರ್ಕಿ ತೆಗ್ದವೆ‌. ಇದರ ಗೈಪು, ಪಲ್ಯ ಮಾಡ್ರೆ ಲಾಯ್ಕ. ಒಂದೆರಡ್ ಸಿಕ್ಕಿರೆ ಉಪ್ಪು‌ ಮೆಣ್ಸ್ ಹಾಕಿ‌ ಸುಟ್ಟು ತಿಂಬಕೂ ಆದೆ.

೨. ಹೆಗ್ಲ್ ಅಳ್ಂಬು

ಇದ್ ಆಟಿ ತಿಂಗ ಕಳ್ದ ಮೇಲೆ ಹೆಚ್ಚಾಗಿ‌ ಎದ್ರುವ ಅಳ್ಂಬು. ಇದ್ ಒಂದೇ ಕಡೆ ಸುಮಾರ್ ೧೫೦-೨೦೦ ಕಾಲ್’ಗ ಒಟ್ಟಿಗೆ ಎದ್ದದೆ. ಕಮ್ಮಿ ತೇಳ್ರು ೨೦-೩೦ ಕಾಲ್’ಗ ಅಂತು ಇದ್ದೇ ಇದ್ದದೆ.. ಇದ್ ಗೈಪುಗೆ ಬಾಳ ಲಾಯ್ಕ.. ಕಾಯಿ ಕಡ್ದ್ ಹಾಕಿ ಮಾಡ್ದರಂತೂ ಇನ್ನೂ ರುಚಿ. ಸುರುನ ದಿನ ಸಣ್ಣ ತಲೆಗ ನೆಲಂದ‌ ಕೊಡಿಗೆ ಬಾಕೆ‌ ಸುರು ಆಗಿ ಮಾರನೆ ದಿನಕ್ಕೆ ಅರ್ಳಿ ಸಿಕ್ಕಿದೆ. ಇದರ ಕೆಲವ್ ಕಡೆ ಸಂತೆಗೆ ತಂದ್ ಮಾರಾಟ ಸ ಮಾಡುವೆ.. ಕೆ.ಜಿ ಗೆ ₹೪೦೦ ವರೆಗೆ ಬೆಲೆ ಉಟ್ಟು..

೩. ಬೆಳ್ಜರ್ ಮತ್ತೆ ಹುಲ್ಲು ಅಳ್ಂಬು

ಈ ಅಳ್ಂಬುಗ ಮಳೆ ಸುರು ಆದ ಮೇಲೆ ಎದ್ರಿಕೆ ಸುರು ಆದೆ. ಇದ್ ಹೆಚ್ಚಾಗಿ ತೋಟದ ನಡುಲಿ ಕರ್ಗಿದ ಸೊಪ್ಪುಗಳ ಎಡೆಲಿ ಎದ್ದದೆ. ಬೆಳ್ಜರಿ ಅಳ್ಂಬು ತೋಟ ಇಡೀ ಹಾಲ್ನೊರೆ ಚೆಲ್ಲಿದಂಗೆ ಬೆಳ್ಳಂಗೆ ಆಗಿ ಕಂಡದೆ.

ಇದರ ಜೊಂಪೆ ಜೊಂಪೆ ಕಿತ್ತ್ ತಂದ್ ಸಜ್ಜಿ‌ ಮಾಡಿ ಗೈಪು ಮಾಡುವೆ. ಇದರ್ದ್ ಸಣ್ಣ ಸಣ್ಣ ಕಾಲ್’ಗ ಆದರ್ಂದ ಸಜ್ಜಿ‌‌ ಮಾಡಿಕೆ ಹಂಞ ಬಂಙ ಉಟ್ಟು..
ಗೈಪು ಮಾಡಿ ಆದಮೇಲೆ ನೂಡಲ್ಸ್ ನಂಗೆ ಕಂಡದೆ‌, ಬಾಳ ರುಚಿ.

ಇನ್ನ್ ಹುಲ್ಲಂಳ್ಂಬು ಇದರಂಗೆ ಇದ್ದರೂ ಹಂಞ ಬೂದು ಬಣ್ಣ ಮತ್ತೆ ಇದರಂಗೆ ಒಟ್ಟೊಟ್ಟಿಗೆ ಇರ್ದುಲೆ.. ಸಣ್ಣ ಸಣ್ಣ ಗುಂಪು‌ ಆಗಿ‌ ದೂರ ದೂರ ಎದ್ದದೆ. ಕರ್ಗಿದ ಮರ ಇಲ್ಲೆ ಹುಲ್ಲು ಇರುವ ಜಾಗೆಲಿ ಎದ್ದದೆ..

೪. ಮರ ಅಳ್ಂಬು ಮತ್ತೆ ಮೊಟ್ಟೆ ಅಳ್ಂಬು

ಮರಗಳ ಕೊಂಬೆಲಿ ಬೆಳೆವ ಈ ಅಳ್ಂಬುನ ಸ ಗೈಪು, ಪಲ್ಯ ಮಾಡುವೆ. ಪೇಟೆಲಿ ಸಿಕ್ಕುವ ಆಯಿಸ್ಟರ್ ಮಶ್’ರೂಮೇ ಈ ಮರ ಅಳ್ಂಬು. ಇದರ ಬಣ್ಣ ಸ ಬೆಳ್ಳಂಗೆ ಇದ್ದದೆ.. ಕೊಡಿಲಿ ಬೇರೆ ಅಳ್ಂಬುನಂಗೆ ನೋಳಿ ಇರ್ದುಲೆ.

ಮೊಟ್ಟೆ ಅಳ್ಂಬು ಇಲ್ಲರೆ ಕಲ್ಲ್ ಅಳ್ಂಬು. ಇದ್ ಸಾಧಾರಣ ಗೋಲಿನಂಗೆ ಇರುವ ಅಳ್ಂಬು. ಬಣ್ಣ ಬಿಳಿ. ಮರಗಳ ಬುಡಲಿ ಎದ್ದದೆ. ಅರೆ ಮಲೆನಾಡ್ ಪ್ರದೇಶಲಿ ಹೆಚ್ಚಾಗಿ ಕಾಂಬಕೆ ಸಿಕ್ಕಿದೆ.

ಈ ಎರಡೂ ಅಳ್ಂಬುನ ಗೈಪು ಮಾಡವ್ ಹಂಞ ಕಮ್ಮಿನೇ..

೫. ಆನೆ ಕೆತ್ತಿಲ್ / ಆನೆ ಕಾಲ್ ಅಳ್ಂಬು

ಹೆಸ್ರೇ ಹೇಳುವಂಗೆ ಇದ್ ಆನೆ ಕಾಲ್’ನಷ್ಟ್ ಅಗಲ ಬೆಳೆವ ಅಳ್ಂಬು.. ಒಂದೇ ಜಾಗೆಲಿ ಹತ್ತಾರ್ ಕಾಲ್’ಗ ಅರ್ಳಿ ನಿತ್ತದೆ.. ದೂರಂದ ನೋಡ್ಕನ ಆನೆ ಹೆಜ್ಜೆ ಇಸಿದಂಗೆ ಕಂಡದೆ. ಇದರ ಕೊಡಿಲಿ ಸ ನೋಳಿ ಇರ್ದುಲೆ.

ಇದರ ಪದಾರ್ಥ ಮಾಡವು ಬಾಳ‌‌ ಕಮ್ಮಿ.. ರುಚಿಲಿ ಮರ ಅಳ್ಂಬುನಂಗೆ ಆದರೂ ಒಂಥರಾ ಸಿಂಡ್‌. ಹಂಗಾಗಿ ಏನೋ ಜನ ಅಷ್ಟ್ ಇಷ್ಟ ಪದಡ್.

ಹಿಂಗೆ ಒಂದಷ್ಟ್ ಅಳ್ಂಬುಗಳ ಮಳೆಗಾಲಲಿ ಗೈಪು ಮಾಡಿ‌ ತಿಂದವೆ. ಫಂಗಸ್ (ಬೂಸು) ಜಾತಿಗೆ ಸೇರ್ದ ಈ ಅಳ್ಂಬುಗ ನೂರಾರು ವಿಧಗಳ್ಲಿ ನಾವ್ಗೆ ಕಾಂಬಕೆ‌ ಸಿಕ್ಕಿದೆ.

ಆದರೆ ಸಿಕ್ಕ ಸಿಕ್ಕ ಅಳ್ಂಬುಗಳ ತಿಂಬಕೆ ಬೊತ್ತ್. ಅದರ್ಲಿ ವಿಷ ಅಣಬೆಗ ಸ ಇದ್ದದೆ‌‌. ತಜ್ಞರ್ ಹೇಳುವಂಗೆ ಅಣಬೆಗಳ ಸುತ್ತ ನುಸಿಗ ಹಾರಿಕಂಡ್ ಇದ್ದರೆ ಅಂತದ್ ತೊಂಬಕೆ ಯೋಗ್ಯತ.

ಈಗಾಗಲೆ ಮಳ್ಗಾಲ ಸುರು ಆಗ್ತಾ ಇದ್ದ್. ಎಲ್ಲವೂ ಈ ವಿಶೇಷ ಅತಿಥಿನ ಎದುರು ನೋಡ್ತಾ ಒಳೊ..

✍🏻ವಿನೋದ್ ಮೂಡಗದ್ದೆ,

ಅರೆಭಾಷೆ ಮುಡ್ಪು ಮಾಸಿಕ ಪತ್ರಿಕ ಸಂಪಾದಕರು ಮತ್ತು ಹವ್ಯಾಸಿ ಬರಹಗಾರರು

error: Content is protected !!