fbpx

ಮಳೆ :ಹೈ ಅಲರ್ಟ್!

ಕೊಡಗು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯುವ ಲಕ್ಷಣ ಇದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ
ಸರಾಸರಿ ಮಳೆ 66.75 ಮಿ.ಮೀ. ಮಳೆ ದಾಖಲಾಗಿದ್ದು,
ಮಡಿಕೇರಿ ತಾಲ್ಲೂಕಿನಲ್ಲಿ 114.8 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ 47.5 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 37.95 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ಗಮನಿಸುವುದಾದರೆ ಮಡಿಕೇರಿ ಕಸಬಾ 93.6, ನಾಪೋಕ್ಲು 26.4, ಸಂಪಾಜೆ 164.2, ಭಾಗಮಂಡಲ 175, ವಿರಾಜಪೇಟೆ ಕಸಬಾ 71, ಹುದಿಕೇರಿ 68, ಶ್ರೀಮಂಗಲ 58, ಪೊನ್ನಂಪೇಟೆ 24, ಅಮ್ಮತ್ತಿ 44, ಬಾಳೆಲೆ 20, ಸೋಮವಾರಪೇಟೆ ಕಸಬಾ 35, ಶನಿವಾರಸಂತೆ 15, ಶಾಂತಳ್ಳಿ 85, ಕೊಡ್ಲಿಪೇಟೆ 20.2, ಕುಶಾಲನಗರ 28.2, ಸುಂಟಿಕೊಪ್ಪ 44.3 ಮಿ.ಮೀ.ಮಳೆಯಾಗಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ ನೋಡುವುದಾದರೆ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು ಇದ್ದು ಒತಳಹರಿವು ಹೆಚ್ಚಾದ ಕಾರಣ ಇಂದಿನ ಮಟ್ಟ 2858.51 ಅಡಿಗಳಿದೆ, ಕಳೆದ ವರ್ಷ ಇದೇ ದಿನ 2858.13 ಅಡಿ ಇತ್ತು. ಹಾರಂಗಿಯಲ್ಲಿ ಬಿದ್ದ ಮಳೆ 35.4 ಮಿ.ಮೀ. ಇಂದಿನ ನೀರಿನ ಒಳಹರಿವು 5819 ಕ್ಯುಸೆಕ್, ಹೊರ ಹರಿವು ನದಿಗೆ 5837, ನಾಲೆಗೆ 500 ಕ್ಯೂಸೆಕ್ಸ್ ಬಿಡಲಾಗಿದೆ.

error: Content is protected !!