ಮಳೆ ಹಾನಿ ಪರಿಹಾರ ಹಾಗು ಸೂರಿನ ಭರವಸೆ ನೀಡಿದ ನೂತನ ಉಸ್ತುವಾರಿ ಸಚಿವರು

ಒಂದು ವಾರದ ಒಳಗಾಗಿ ಮಳೆ ಹಾನಿ ಮತ್ತು ಕೋವಿಡ್ ಸಂಬಂಧ ಪರಿಹಾರಗಳನ್ನು ಕೊಡಗು ಜಿಲ್ಲೆಗೆ ಒದಗಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಸಾಕಷ್ಟು ಕುಟುಂಬಗಳು ಇನ್ನು ಕೂಡ ಶಾಶ್ವತ ಸೂರು ಕಂಡಿಲ್ಲ ಅಂತಹವರ ನೆರವಿಗೆ ನಿಲ್ಲುವುದಾಗಿ ನೂತನ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಭರವಸೆ ನೀಡಿದರು. ಮನೆ ಕಳೆದುಕೊಂಡವರ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗುವ ಪ್ರಕ್ರಿಯೆ ಜಿಲ್ಲಾಡಳಿತ ನಡೆಸಿದ್ದು, ಸೂಕ್ತ ಜಾಗ ಸಿಕ್ಕಿದ ತಕ್ಷಣ ನಿವೇಷನ ನೀಡುವ ವ್ಯವಸ್ಥೆಯಾಗಲಿದೆ ಎಂದು ಆಶ್ವಾಸನೆ ನೀಡಿದರು.