ಮಳೆ ಹಾನಿ ಕುರಿತು ಕಂದಾಯ ಸಚಿವರ ಮಾಹಿತಿ

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆ ಹಾನಿ ಮತ್ತು ಪರಿಹಾರ ಕುರಿತು ವಿಧಾನ ಪರಿಷತ್ ನಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯರವರು ಕಂದಾಯ ಸಚಿವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಆರ್.ಅಶೋಕ್ ಅವರು, ಮಳೆಯಿಂದಾದ ಅನಾಹುತದಲ್ಲಿ ಒಟ್ಟು ಮಾನವ ಹಾನಿ 1,ಜಾನುವಾರು ಜೀವ ಹಾನಿ 7, ಬೆಳೆ ಹಾನಿ 6 ಹೆಕ್ಟೇರ್, ಮನೆ ಹಾನಿ 102 ಆಗಿವೆ. ಮೂಲಸೌಕರ್ಯ ಹಾನಿ ರೂ.20 ಕೋಟಿ ಅಷ್ಟಾಗಿದೆ.

ಜಿಲ್ಲಾ ವಿಪತ್ತು ಪರಿಹಾರ ನಿಧಿಯ ಖಾತೆಯಲ್ಲಿ 79.22 ಕೋಟಿ ರೂ ಲಭ್ಯವಿದ್ದು, ಕೇಂದ್ರ ಸರ್ಕಾರದ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಒದಗಿಸಲಾಗುವ ಪರಿಹಾರವನ್ನು ಬಳಸಲಾಗುವುದು. ಮಾರ್ಗಸೂಚಿಗಳ ಅನ್ವಯ ಪರಿಹಾರ ಕಾರ್ಯ ನೀಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರಿಗೆ ಸೂಚನೆ ನೀಡಲಾಗಿದೆ ಎಂದರು.

error: Content is protected !!