ಮಳೆ ಪರಿಹಾರದ ವಿಚಾರ; ಕೊಡಗಿಗೆ ಅನಿವಾರ್ಯವಾಗಿಲ್ಲ: ಕೆಜಿಬಿ ಸ್ಪಷ್ಟಣೆ

ಮುಖ್ಯಮಂತ್ರಿ ಮಳೆ ಪರಿಹಾರ ಘೋಷಣೆ ವಿಚಾರದಲ್ಲಿ ವಿಪಕ್ಷ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು ಶಾಸಕ ಕೆ.ಜಿ ಬೋಪಯ್ಯ ಸ್ಪಷ್ಟ ಪಡಿಸಿದ್ದಾರೆ.

‘ಕೊಡಗಿಗೆ ಅನ್ಯಾಯವಾಗಿಲ್ಲ’ ಶಾಸಕ ಕೆ.ಜಿ ಬೋಪಯ್ಯ ಸ್ಪಷ್ಟನೆ ನೀಡಿದ್ದು,ಮುಖ್ಯಮಂತ್ರಿ ಬಿಡುಗಡೆ ಮಾಡಿರುವುದು ಬೆಳೆ ಅಥವಾ ರಸ್ತೆ ದುರಸ್ತಿಯಂತಹ ಪರಿಹಾರದ ಹಣವಲ್ಲ.

ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಇತರೆ ಮಳೆ ಪೀಡಿತ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ
ಕೊಡಗು ಜಿಲ್ಲಾಧಿಕಾರಿ ಬಳಿ ಒಟ್ಟು 71 ಕೋಟಿ.ರೂ ತುರ್ತು ಪರಿಹಾರದ ಹಣವಿದೆ.
ಅದರಲ್ಲಿ ಈಗಾಗಲೇ ಆಗಬೇಕಿರುವ ತುರ್ತು ಪರಿಹಾರಕ್ಕಾಗಿ ಮೀಸಲಿಟ್ಟ ಹಣ ಹೊರತುಪಡಿಸಿ ಇನ್ನೂ 35 ಕೋಟಿ ಬಾಕಿ ಇದೆ. ಆದ್ದರಿಂದ ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೊಡಗನ್ನು ಸೇರಿಸಲಾಗಿಲ್ಲ. ಅನುದಾನ ಬಿಡುಗಡೆಯಾಗಿಲ್ಲವೆಂದು ಜಿಲ್ಲೆಯ ಜನ ನಿರಾಶರಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!