ಮಳೆಯಿಂದಾಗಿ ಕೊಡಗಿನಲ್ಲಿ 3 ಕೋಟಿ ರೂ ನಷ್ಟ!

ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಅಂದಾಜು 3 ಕೋಟಿಯಷ್ಟು ಸೆಸ್ಕ್ ಗೆ ನಷ್ಟವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
1589 ವಿದ್ಯುತ್ ಕಂಬಗಳು,137 ಟ್ರಾನ್ಸ್ಫಾರಮ್, ವಿದ್ಯುತ್ ತಂತಿಗಳು ಹಾನಿಯಾಗಿದೆ ಎಂದು ಸೆಸ್ಕ್ ಇ.ಇ ಅನಿತಾಬಾಯಿ ತಿಳಿಸಿದ್ದಾರೆ.
ಮಡಿಕೇರಿ 480,ವಿರಾಜಪೇಟೆ 337,ಪೊನ್ನಂಪೇಟೆ 325,ಸೋಮವಾರಪೇಟೆ 212 ಹಾಗು ಕುಶಾಲನಗರ ತಾಲೂಕಿನಲ್ಲಿ 228 ವಿದ್ಯುತ್ ಕಂಬಗಳು ಹಾಳಾಗಿದೆ.
ಇದೀಗ ಹಾನಿಯಾದ ಕಂಬಗಳ ದುರಸ್ಥಿ ಕಾರ್ಯ ನಡೆಸಲಾಗುತ್ತಿದ್ದು, ಈ ಹಿಂದಿನ ವರ್ಷಗಳಲ್ಲಿ ಆಗತ್ತಿದ್ದ ಗಮನಿಸಿ ಮುಂಜಾಗೃತ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಸಾಕಷ್ಟು ನಷ್ಟ ತಡೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.