ಮಳೆಗಾಗಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ರೈತಾಪಿ ವರ್ಗ ವಾಡಿಕೆಯಂತೆ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುತ್ತಾರೆ, ಅದಕ್ಕಾಗಿ ಗ್ರಾಮ ದೇವರ ಮೊರೆ ಹೋಗುವುದು ಸಹಜ. ಅದರಂತೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದೇವರಾದ ಸುಬ್ರಹ್ಮಣ್ಯ ಮತ್ತು ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು.

ಇದೇ ವೇಳೆ ಗ್ರಾಮ ಆಪಡಂಡ, ಚಿಮ್ಮಂಡ, ಕಡ್ಯದ, ಚೆರಿಯಮನೆ, ಕೂಪದಿ, ಕೊಂಪುಳೀರ ಕುಟುಂಬಸ್ಥರು ಪೂಜೆ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು,ಅಕಾಲಿಕ ಮಳೆ, ವನ್ಯ ಜೀವಿ ಹಾವಳಿ,ಪ್ರಕೃತಿ ವಿಕೋಪದಂತಹಾ ಅನಾಹುತಕ್ಕಿಂತ ತಡೆಯುವ ಸಲುವಾಗಿ ಪೂಜೆಗಳು ನಡೆದವು,ಮಹಾಪೂಜೆ ಬಳಿಕ ಭಕ್ತರಿಗೆ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ವ್ಯವಸ್ತೆ ಮಾಡಲಾಯಿತು.ಏಪ್ರಿಲ್ 11 ರಂದು ಗ್ರಾಮದ ಒಳಿತಿಗಾಗಿ ಮುಡಿಪು ಪೂಜೆ ಮತ್ತು ನಾಗ ಪೂಜೆ ನೆರವೇರಲಿದೆ. ಏಪ್ರಿಲ್4 ರಂದು ಗೊನೆ ಕಡಿಯುವ ಕಾರ್ಯ ನಡೆಯಲಿದೆ.