ಮಲ ತಂದೆಯಿಂದ 5 ವರ್ಷದ ಮಗುವಿನ ಹತ್ಯೆ

ಕೊಡಗು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂಬ ಕಾರಣದಿಂದ ವ್ಯಕ್ತಿಯೊಬ್ಬ 5 ವರ್ಷದ ಮಲಮಗುವನ್ನು ಹತ್ಯೆ ಮಾಡಿರುವ ಪೈಶಾಚಿಕ ಘಟನೆ ವರದಿಯಾಗಿದೆ.ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಈ ಅಮಾನುಷ ಕೃತ್ಯ ನಡೆದಿದೆ.
ಹುಣಸೂರಿನ ಲಕ್ಷ್ಮಿ ಎಂಬಾಕೆ ಕಳೆದ ಆರು ತಿಂಗಳ ಗಂಡನನ್ನು ತೊರೆದು 5 ವರ್ಷದ ಮಗುವಿನೊಂದಿಗೆ ರವಿಯ ಜೊತೆಗೆ ವಾಸವಾಗಿದ್ದಳು.ಆದರೆ ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತಿದೆ ಎಂದು ರವಿ ಪದೇ ಪದೇ ಲಕ್ಷ್ಮಿಯೊಂದಿಗೆ ಕ್ಯಾತೆ ತೆಗೆಯುತ್ತಿದ್ದ ಎಂದು ಹೇಳಲಾಗಿದೆ.ಈ ವಿಚಾರವಾಗಿ ಇವರಿಬ್ಬರ ನಡುವೆ ನಿನ್ನೆ ರಾತ್ರಿ ಕಲಹವೇರ್ಪಟ್ಟಿದೆ. ಗಲಾಟೆಯ ನಡುವೆ ರವಿ ಮಗುವನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಶ್ರೀಮಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.