ಮಲ್ಲಿಕಾರ್ಜುನ ನಗರದ‌ ಬಡ‌ ಹಾಗು ಕೋವಿಡ್ ಸೋಂಕಿತ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಮಡಿಕೇರಿ: ಕೋವಿಡ್ ನಿಂದ‌ ಸಂಕಷ್ಟಕ್ಕೀಡಾದ ಮಲ್ಲಿಕಾರ್ಜುನ ನಗರದ 20 ಕುಟುಂಬಗಳಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಆಹಾರ ಕಿಟ್ಟನ್ನು ವಿತರಿಸಲಾಯಿತು.

ದ.ಸಂ.ಸಮಿತಿಯ‌ ಜಿಲ್ಲಾ ಸಂಚಾಲಕರಾದ ದಿವಾಕರ್ ಹೆಚ್ ಎಲ್ ಮಾತನಾಡಿ ದ.ಸಂ.ಸಮಿತಿಯು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ಕಾರ್ಯಗಳನ್ನು ಮಾಡುತ್ತಿದ್ದು. ಲಾಕ್ಡೌನ್ ಸಂಧರ್ಭದಲ್ಲಿ ಕೋವಿಡ್ ಸೋಂಕಿಗೆ ಒಳಪಟ್ಟ ಕುಟುಂಬಗಳಿಗೆ ಕಿಟ್ಟನ್ನು ವಿತರಿಸುವ ಮೂಲಕ ಜನರು ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದರು.
ತಾಲ್ಲೂಕು ಸಂಚಾಲಕರಾದ ದೀಪಕ್ ಎ ಪಿ ಮಾತನಾಡಿ ಸಂಕಷ್ಟದಲ್ಲಿರುವ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವ ಸಲುವಾಗಿ ಆಹಾರ ಕಿಟ್ ವಿತರಿಸುತ್ತದ್ದೇವೆ. ಈ ರೀತಿಯಾಗಿ ಒಬ್ಬರು ಮತ್ತೊಬ್ಬರಿಗೆ ಸ್ಪಂದಿಸುವುದರಿಂದ ಸಮಾಜದ ಎಂತಹ ಪಿಡುಗುಗಳನ್ನು ಮುಕ್ತಗೊಳಿಸಲು ಸಾದ್ಯವೆಂದರು. ಕಾರ್ಯಕ್ರಮದ ಕೊನೆಯಲ್ಲಿ ಕಿಟ್ ವಿತರಿಸಲಾಯಿತು.
ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.

error: Content is protected !!