fbpx

ಮಲ್ಲಳ್ಳಿ ವೀಕ್ಷಣೆಗೆ ಮುಕ್ತ

ಫೋಟೋ ಕೃಪೆ:ಮಹೇಶ್ ಸೋಮವಾರಪೇಟೆ

ಕೊಡಗು(ಸೋಮವಾರಪೇಟೆ): ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವನಿ ನೇತ್ರಾವತಿ ಸೇರುವರೆಗೂ ಹರಿಲ್ಪಡುವ ಕುಮಾರಧಾರೆಯಿಂದ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಂಡಿದೆ. ಮಡಿಕೇರಿಯ ಅಭಿ ಜಲಪಾತ,ವಿರಾಜಪೇಟೆಯ ಕುರ್ಚಿ ಗ್ರಾಮದ ಇರ್ಪು ಜಲಪಾತಕ್ಕೆ ಪ್ರವೇಶ ಆರಂಭವಾಗಿರುವ ಬೆನ್ನಲ್ಲೇ ಮಲ್ಲಳ್ಳಿಗೂ ಪ್ರವೇಶ ಮಾಡಬಹುದಾಗಿದೆ. ಕೊಡಗಿನಲ್ಲಿ ಮಳೆ ಆರ್ಭಟ ಮುಂದುವರೆದಿರುವ ಹಿನ್ನಲೆಯಲ್ಲಿ ಅತ್ತ ಹಾಸನ ಭಾಗದಿಂದ ನೀರು ಕುಮಾರಧಾರನಿಗೆ ಸೇರಿ ಮೈನವಿರೇಳಿಸುವ ದೃಶ್ಯ ಕಾಣ ಸಿಗುವ ಮಲ್ಲಳ್ಳಿ ಜಲಪಾತ ಇರೋದು ಹಾಸನ ಮತ್ತು ಕೊಡಗು ಗಡಿ ಭಾಗದಲ್ಲಿ. ಸೋಮವಾರಪೇಟೆ ಬಂದು ಶಾಂತಳ್ಳಿ ಮೂಲಕ ಸ್ವಲ್ಪ ದೂರ ಕ್ರಮಿಸಿದರೆ ಸಾಕು ಒಂದು ಜಂಕ್ಷನ್, ಅಲ್ಲಿಂದ ನಿಮ್ಮದೇ ವಾಹನವಿದ್ದರೆ ಒಂದೆರೆಡು ಕಿಲೋಮೀಟರ್ ಹಚ್ಚ ಹಸುದಿನ ದಾರಿಯಲ್ಲಿ ಸಾಗಿದರೆ ಒಂದು ಪಾರ್ಕಿಂಗ್ ಸ್ಥಳ ಸಿಗಲಿದ್ದು ಅಲ್ಲಿಂದಲೇ ಮಲ್ಲಳ್ಳಿಯ ರೌಧ್ರತೆ ಕೇಳಿ ಬರುತ್ತದೆ.ಕಾಲ್ನಡಿಗೆಯಲ್ಲಿ ಸಾಗಿದರೆ ಹತ್ತು ನಿಮಿಷದಲ್ಲಿ ವೀಕ್ಷಣೆಗೆ ತಲುಪಬಹುದು.ವಾಹನಕ್ಕೆ ಹೆಚ್ಚುವರಿ ಶುಲ್ಕ ಬೇಡ ಮಳೆ ಇಲ್ಲದಿದ್ದು ನಡೆದುಕೊಂಡೇ ಹೋದರೆ ಖರ್ಚು ಮಿಕ್ಕಲಿದೆ.

ಅಪಾಯ ತಪ್ಪಿದಲ್ಲ:

ಜಲಪಾತಕ್ಕೆ ತೆರಳುವುದು ಸುಮ್ಮನಲ್ಲ,ನಮ್ಮ ಜೋಪಾನ ನಮಗೆ ಮುಖ್ಯವಾಗಿರುತ್ತದೆ. ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹತ್ತಿರದಿಂದ ನೋಡಲು ಅವಕಾಶವಿದ್ದರೂ ದೂರದಿಂದಲೇ ನೋಡಿ ಆಸ್ವದಿಸಿ,ಮೋಜು ಮಸ್ತಿಗೆ ಅವಕಾಶ ಕೊಡಬೇಡಿ.

ಹೊಟೇಲ್ ವ್ಯವಸ್ಥೆ ಇಲ್ಲ:

ಈ ಪ್ರದೇಶದಲ್ಲಿ ಹೋಟೇಲ್ ಆಗಲಿ,ಕ್ಯಾಂಟೀನ್ ಆಗಲಿ ವ್ಯವಸ್ಥೆಗಳಿಲ್ಲ. ಜಲಪಾತ ಪ್ರವೇಶ ಮೊದಲೇ ಕೆಲವೊಂದು ಮನೆಗಳಲ್ಲಿ ಆಹಾರ ಮಾಡಿಕೊಡುವ ವ್ಯವಸ್ಥೆಯಿದೆ. ಮಾಂತಸ ಆಹಾರ ಬೇಕಾದಲ್ಲಿ ನೀವೇ ನಿಮ್ಮ ತಂಡದ ಮಂದಿಗೆ ತಕಷ್ಟು ಮಾಂಸ ಕೊಟ್ಟು ವಾಪಸ್ ಬರುವಷ್ಟರಲ್ಲಿ ಆಹಾರ ತಯಾರಾಗಿರುತ್ತದೆ.ಕೊಡಿಗಿನ ಖಾದ್ಯದ್ಯಗಳು ಸಿಗುತ್ತವೆ. ನಿರ್ಧಿಷ್ಟ ಬಿಲ್ ಜೊತೆ ಚಳಿ ಮಳೆಯಿಂದ ಜಲಪಾತ ನೋಡಿ ವಾಪಸ್ ಬಂದವರಿಗೆ ಬಿಸಿಬಿಸಿ ಊಟ ಸಿಗಲಿದೆ.

ಗಿರಿಧರ್ ಕೊಂಪುಳೀರ.

error: Content is protected !!