fbpx

ಮನೆ ಮೇಲೆ ಬರೆ ಕುಸಿತ

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಯ ಪೊನ್ನತ್ ಮೊಟ್ಟೆ ಯಲ್ಲ್ಲಿ ಗುಡ್ಡೆ ಕುಸಿದ ಪರಿಣಾಮ ಬರೆಯಲ್ಲಿದ್ದ ಭಾರಿ ಗಾತ್ರದ ಮರ ಮನೆ ಮೇಲೆ ಬಿದ್ದು ಸಾಕಷ್ಟು ಅನಾಹುತ ಮಾಡಿದೆ.

ಕೆಲವು ದಿನಗಳ ಹಿಂದೆಯಷ್ಟೆ ಅಪಾಯದ ಮುನ್ಸೂಚನೆ ಅರಿತು ಈ ಸಂಪೂರ್ಣ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಮನೆಗೆ ವಾಪಸ್ಸಾಗಿದ್ದ ಕುಟುಂಬ, ರಾತ್ರಿ ಮಲಗಿದ್ದ ಸಂದರ್ಭ ಮರ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಸಾಕಷ್ಟು ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.

error: Content is protected !!