ಮನೆ ಕುಸಿದು ಹಾನಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ

ಭಾರೀ ಮಳೆಗೆ ಚೇರಳ ಶ್ರೀಮಂಗಲ ಗ್ರಾಮ ಚೆಟ್ಟಳ್ಳಿಯ ಎಂ. ಪ್ರೇಮ ಜೋಯಪ್ಪ ಎಂಬವರ ವಾಸದ ಮನೆಯ ಗೋಡೆ ಕಳೆದ ಶನಿವಾರ ಸುರಿದ ಬಾರಿ ಮಳೆಯ ಕಾರಣ ಕುಸಿದುಹೋಗಿದ್ದು ಮನೆ ಮಳೆಯಿಂದ ಭಾಗಶಃ ಹಾನಿಯಾಗಿರುತ್ತದೆ.

ಮನೆಯು ಕಚ್ಚಾ ಮನೆಯಾಗಿದ್ದು, ಅಧಿಕೃತ ಮನೆಯಾಗಿದ್ದು, ಶೇಕಡಾ 20ರಷ್ಟು ಹಾನಿಯಾಗಿರುತ್ತದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಸುಂಟಿಕೊಪ್ಪ ಹೋಬಳಿ ಚೆಟ್ಟಳ್ಳಿಯ ಗ್ರಾಮ ಲೆಕ್ಕೀಕರಾದ ಎಸ್. ನಾಗೇಂದ್ರ ಅವರು ತಿಳಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

error: Content is protected !!