fbpx

ಮನೆ ಕುಸಿತದಿಂದ ತಾಯಿ ಮಗಳು ಪಾರು!

ಇತ್ತೀಚೆಗಿನ ಮಳೆಯ ಪರಿಣಾಮ ಮನೆಯೊಂದು ಕುಸಿದು ಬಿದ್ದು ಕೂದಲೆಳೆ ಅಂತರದಲ್ಲಿ ತಾಯಿ ಮತ್ತು ಮಗಳು ಪಾರಾದ ಘಟನೆ ಹಾಲೇರಿ ಗ್ರಾಮದ ಕದಂಡಾಲು ಎಂಬಲ್ಲಿ ನಡೆದಿದೆ.

ಇಲ್ಲಿನ ಚೋಂದಕ್ಕಿ ಎಂಬ ವಯಸ್ಸಾದ ವಿಧವೆ ತನ್ನ ಮಗಳೊಂದಿಗೆ ವಾಸವಿದ್ದಳು,ಕಡು ಬಡವರಾಗಿದ್ದ ಇವರು ಆಶ್ರಯಕ್ಕೆಂದು ಇದ್ದ ಮನೆ ನೆಲಕುರಳಿದೆ. ಮಳೆಯ ತೀವ್ರತೆಗೆ ಮನೆ ಸೋರುತ್ತಿರುವುದನ್ನು ನೋಡಿ ಪ್ರಾಣಾಪಾಯದಿಂದ ಪಾರಗಿ ಮುಕ್ಕೋಡ್ಲು ಗ್ರಾಮದ ನೆಂಟರ ಮನೆಗೆ ತೆರಳಿದ ಇವರು ಮರುದಿನ ನೋಡುವಾಗ ಮನೆ ಸಂಪೂರ್ಣ ನೆಲಕಚ್ಚಿರುವುದು ಕಂಡು ಬಂದಿದೆ.

error: Content is protected !!