ಮನೆಯಲ್ಲಿ ಒಬ್ಬಂಟಿ ಆಗಿದ್ದ ಕೋವಿಡ್ ಸೋಂಕಿತ ಹೃದಯಾಘಾತದಿಂದ ನಿಧನ

ಕೊಡಗು: ಸೋಮವಾರಟೇಟೆ ತಾಲ್ಲೂಕಿನ ಮಾದಾಪುರ ಬಳಿಯ ಕುಂಬೂರು ಗ್ರಾಮದಲ್ಲಿ ಘಟನೆ. ಮಂದಣ್ಣ ಅವರ ಪುತ್ರ ಸುಬ್ಬಯ್ಯ
(67 ವರ್ಷ) ಎಂಬುವವರು
ಕೋವಿಡ್ ಸೋಂಕಿಗೆ ಒಳಗಾಗಿ ಮನೆಯಲ್ಲಿ ಸಂಪರ್ಕ ತಡೆಯಲಿದ್ದರು.
ಮೂರು ದಿನಗಳಿಂದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಸಂಶಯಗೊಂಡು ನಿನ್ನೆ ರಾತ್ರಿ ಶಾಸಕ ರಂಜನ್ ಅವರಿಗೆ ಮಾಹಿತಿ ನೀಡಿದ್ದು,ಬೆಳಗ್ಗೆ ಶಾಸಕ ಅಪ್ಪಚ್ಚುರಂಜನ್, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆಗೆ ಮನೆಗೆ ತೆರಳಿ ಬಾಗಿಲು ತೆಗೆದು ನೋಡಿದಾಗ ಕುರ್ಚಿಯಲ್ಲಿ ಕುಳಿತಿದ್ದ ಸ್ಥಿತಿಯಲ್ಲಿ ಸುಬ್ಬಯ್ಯ ಮೃತದೇಹ ಪತ್ತೆಯಾಯಿತು.
ಸಾವನ್ನಪ್ಪಿ ಎಷ್ಟು ದಿನಗಳಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕಳುಹಿಸಲಾಗಿದೆ.