ಮನೆಗೆ ಅಪ್ಪಳಿಸಿದ ಲಾರಿ!

ಮಡಿಕೇರಿ ತಾಲ್ಲೂಕಿನ ಮದೆನಾಡುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮನೆಯೊಂದಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಮನೆ ಬಹುತೇಕ ಜಖಂಗೊಂಡು, ಮನೆಯಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ.

ಇಳಿ ಜಾರಿನ ಪ್ರದೇಶದಲ್ಲಿ ಇರುವ ಕುಟ್ಟೆಟಿ ಮಾದಪ್ಪ ಎಂಬುವವರ ಮನೆಗೆ ಲಾರಿ ನುಗಿದ್ದು, ಮನೆ ಭಾಗಶಃ ಹಾನಿಯಾಗಿದೆ. ಘಟನೆಯ ಸಂಬಂಧ ಮಡಿಕೇರಿಯ ಗ್ರಾಮಾಂತರ ಪೊಲೀಸರಿಂದ ಪರಿಶೀಲನೆ ನಡೆದು, ಪ್ರಕರಣ ದಾಖಲಿಸಿದ್ದಾರೆ.