ಮನೆಗಾಗಿ ದಯಾಮರಣಕ್ಕೆ ಮುಂದಾದ ತೃತೀಯ ಲಿಂಗಿ

ಮಡಿಕೇರಿ ನಗರದಲ್ಲಿ ವಾಸಿಸಲು ಮನೆ ನೀಡುತ್ತಿಲ್ಲ ಎಂದು ಅಸಮಾಧಾನ ಗೊಂಡ ತೃತೀಯ ಲಿಂಗ ರಿಹಾನಾ ಹೆಸರಿನ ವ್ಯಕ್ತಿಯೊಬ್ಬರು ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ .

ಮಡಿಕೇರಿ ನಗರದಲ್ಲಿ ಮಳೆಗಾಲ ಸಂದರ್ಭ ಗುಡ್ಡ ಕುಸಿತದ ಸಂದರ್ಭ ಗುಡ್ಡ ದ ಮೇಲಿರುವ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದ ಇವರು ಪರ್ಯಾಯ ಜಿಲ್ಲಾಡಳಿತದ ಸೂಚನೆಯಂತೆ ಮನೆ ಖಾಲಿ ಮಾಡಿದ್ದರು.

ಎಲ್ಲಿಯೂ, ಮನೆ ಸಿಗದ ಸಂದರ್ಭ ಲಾಡ್ಜ್ ನಲ್ಲಿ ಆಶ್ರಯ ಪಡೆದರು. ಭಿಕ್ಷೆ ಬೇಡಿ ಜೀವನ ನಡೆಸುವ ಇವರು ತಾನು ತೃತೀಯ ಲಿಂಗ ಎಂದು ಯಾರೂ ಮನೆ ನೀಡುತ್ತಿಲ್ಲ ಎಂದು ಬೇಸರಗೊಂಡು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದು, ನಗರದಲ್ಲಿ ಮನೆ ಸಿಗದಿದ್ದರೂ ನಿರಾಶ್ರಿತರಿಗೆ ನಗರದ ಹೊರವಲಯದಲ್ಲಿರುವ ಮನೆ ಒದಗಿಸಿ, ಇಲ್ಲವೇ ದಯಾಮರಣಕ್ಕೆ ದಿನ ನಿಗದಿ ಪಡಿಸಿ ಎಂದು ಮನವಿ ಮಾಡಿದ್ದಾರೆ.

error: Content is protected !!