ಮನೆಗಳ್ಳತನ, ಚಿನ್ನಾಭರಣ, ನಗದು ಕಳವು

ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದ ಕಾಕೆರ ಪೂವಯ್ಯ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯ ಬೀರು ಹೊಡೆದು ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಪೂವಯ್ಯ ದಂಪತಿಗಳು ಇಂದು ಮಧ್ಯಾಹ್ನ ಅಕ್ಕಿ ತರಲೆಂದು ಪೊನ್ನಂಪೇಟೆಯ ಸೊಸೈಟಿಗೆ ತೆರಳಿದ್ದ ಸಂಧರ್ಭ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಒಂದು ಚಿನ್ನದ ಪತಾಕ್, ಎರಡು ಚಿನ್ನದ ನಾಣ್ಯ ಹಾಗೂ 25 ಸಾವಿರ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ದಂಪತಿಗಳು ಮನೆಗೆ ಬಂದು ನೋಡಿದಾಗ, ಘಟನೆ ಬೆಳಕಿಗೆ ಬಂದಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಗೋಣಿಕೊಪ್ಪ ವೃತ ನಿರೀಕ್ಷಕ ಜಯರಾಮ್, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ , ಸಿಬ್ಬಂದಿ ಪ್ರಮೋದ್ ಮನು, ಮಹೇಶ್ ಹಾಗೂ ಬಶೀರ್ ಭೇಟಿ ನೀಡಿ ಪರಿಶೀಲಿಸಿ, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.